‘ರವಿಮಾಮ’ನ ಮಗಳ ಸ್ಪೆಷಲ್​ ಆಮಂತ್ರಣ..!

ತಿಂಗಳ ಹಿಂದೆಯಷ್ಟೇ ಕ್ರೇಜಿಸ್ಟಾರ್ ರವಿಚಂದ್ರನ್​ ಅವರ ಮುದ್ದಿನ ಮಗಳ ನಿಶ್ಚಿತಾರ್ಥ ಅದ್ಧೂರಿಯಾಗಿ ನಡೆದಿತ್ತು. ಅವರ ಸಿನಿಮಾಗಳಂತೆಯೇ ನಿಶ್ಚಿತಾರ್ಥ ಕೂಡಾ ಎಲ್ಲರ ಗಮನ ಸೆಳೆದಿತ್ತು. ಮೊನ್ನೆಯೂ ಸ್ಪೆಷಲ್ ಹಾಡಿನ ಉಡುಗೊರೆ ಕೊಟ್ಟಿದ್ದ ರವಿಮಾಮ ಇದೀಗ ಮಗಳ ಮದುವೆಗೆ ವಿಶೇಷವಾದ ಇನ್ವಿಟೇಷನ್ ಸಿದ್ಧಪಡಿಸಿದ್ದಾರೆ. ತಮ್ಮದೇ ಸ್ಕೆಚ್​ ಇರುವಂತಹ ಇನ್ವಿಟೇಷನ್​ ಮಾಡಿಸಲಾಗಿದ್ದು, ರವಿ ಫ್ಯಾಮಿಲಿಯಿಂದ ಪ್ರೀತಿಯ ಆಹ್ವಾನ ನೀಡಿದ್ದಾರೆ. ಮೇ 28 – 29ರಂದು ಬೆಂಗಳೂರಿನಲ್ಲಿ ಅದ್ಧೂರಿ ಮದುವೆ ನಡೆಯಲಿದೆ.

3ಡಿ ಆಹ್ವಾನ ಪತ್ರಿಕೆ..!
ಮುದ್ದಿನ ಮಗಳು ಗೀತಾಂಜಲಿ ಮದುವೆಯನ್ನು ಅದ್ಧೂರಿಯಾಗಿ ಮಾಡುತ್ತಿದ್ದು, ಮದುವೆಗೆ ವಿಶೇಷವಾಗಿ 3D ಆಮಂತ್ರಣ ಪತ್ರಿಕೆಯನ್ನು ಮಾಡಿಸಲಾಗಿದೆ. ಆಮಂತ್ರಣ ಪತ್ರಿಕೆಯಲ್ಲಿ ರವಿಚಂದ್ರನ್ ಫೋಟೋ, ಮದುವೆಯ ವಿವರ ಹಾಗೂ ತಮ್ಮ ಕುಟುಂಬದವರ ಹೆಸರಿದೆ. ಇನ್ನು ಒಂದು ಆಮಂತ್ರಣ ಪತ್ರಿಕೆ ಬೆಲೆ ಸುಮಾರು ₹3 ಸಾವಿರ ರೂಪಾಯಿ ಇರುಬಹುದೆಂದು ಅಂದಾಜಿಸಲಾಗಿದೆ. ಕನ್ನಡ ಚಿತ್ರರಂಗದಲ್ಲೇ ಮೊದಲ ಬಾರಿಗೆ ಎನ್ನುವಂತೆ ತುಂಬಾ ವಿಶೇಷವಾಗಿ 3D ಮದುವೆ ಆಮಂತ್ರಣ ಪತ್ರಿಕೆ ಮಾಡಿಸಲಾಗಿದೆ.