ವಿದ್ಯಾಸಾಗರ್​ ಪ್ರತಿಮೆ ಧ್ವಂಸ ವಿರೋಧಿಸಿ ಪ್ರತಿಭಟನೆ, ಹೆಚ್ಚಿದ ರಾಜಕೀಯ ಬೇಗುದಿ

ಕೊಲ್ಕತ್ತಾ: ನಿನ್ನೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ ರೋಡ್​ಶೋ ವೇಳೆ ನಡೆದ ಗುಂಪುಘರ್ಷಣೆಯಲ್ಲಿ ಈಶ್ವರ್​​ಚಂದ್ರ ವಿದ್ಯಾಸಾಗರ್​ ಅವರ ಪ್ರತಿಮೆ ಧ್ವಂಸ ಮಾಡಿದ್ದನ್ನು ವಿರೋಧಿಸಿ ಸಿಪಿಐ(ಎಮ್​​) ಪಕ್ಷ ಇಂದು ಪ್ರತಿಭಟನೆ ನಡೆಸುತ್ತಿದೆ. ಕೊಲ್ಕತ್ತಾದಲ್ಲಿ ಇಂಥ ಕೃತ್ಯ ನಡೆಯಲು ಹೇಗೆ ಸಾಧ್ಯ ಅನ್ನೋ ಬಗ್ಗೆ ತನಿಖೆ ನಡೆಸಬೇಕು ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯಚುರಿ ಆಗ್ರಹಿಸಿದ್ದಾರೆ.

ಅತ್ತ ಬಿಜೆಪಿ ಕೂಡ ನಿನ್ನೆ ನಡೆದ ಗುಂಪುಘರ್ಷಣೆ ವಿರುದ್ಧ ಮೌನ ಪ್ರತಿಭಟನೆ ನಡೆಸುತ್ತಿದೆ. ಕೇಂದ್ರ ಸಚಿವರಾದ ಹರ್ಷವರ್ಧನ್​, ಜಿತೇಂದರ್​ ಸಿಂಗ್ ಹಾಗೂ ವಿಜಯ್​ ಗೋಯಲ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಇನ್ನು ನಿನ್ನೆಯ ಘಟನೆ ಬಳಿಕ ತೃಣಮೂಲ ಕಾಂಗ್ರೆಸ್​ ಕಾರ್ಯಕರ್ತರು ತಮ್ಮ ಟ್ವಿಟರ್ ಪ್ರೊಫೈಲ್​​ನಲ್ಲಿ ವಿದ್ಯಾಸಾಗರ್​ ಅವರ ಫೋಟೋ ಹಾಕುತ್ತಿದ್ದಾರೆ.

ನಿನ್ನೆ ಕೋಲ್ಕತಾದಲ್ಲಿ ಅಮಿತ್ ಶಾ ನಡೆಸುತ್ತಿದ್ದ ರೋಡ್ ಶೋ ವೇಳೆ ಕೋಲ್ಕತಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗುಂಪುಘರ್ಷಣೆ ನಡೆದು, ಪೊಲೀಸರು ಲಾಠಿ ಚಾರ್ಜ್ ಮಾಡಿದ್ರು. ಘರ್ಷಣೆ  ವೇಳೆ ಈಶ್ವರ್​ ಚಂದ್ರ ವಿದ್ಯಾಸಾಗರ್​ ಅವರ ಪ್ರತಿಮೆ ಧ್ವಂಸವಾಗಿರೋದು ತೀವ್ರ ಚರ್ಚೆಗೆ ಗುರಿಯಾಗಿದೆ.

ಮೇ 19ರಂದು ಕೊನೆಯ ಹಂತದ ಲೋಕಸಭಾ ಚುನಾವಣೆ ನಡೆಯಲಿದ್ದು, ಬಂಗಾಳದ 9 ಸೀಟ್​​ಗಳಿಗೆ ಅಂದು ಮತದಾನ ನಡೆಯಲಿದೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv