ರಕ್ಷಣೆಗೂ ಸೈ, ಹಾಡುಗಾರಿಕೆಗೂ ಸೈ: ರಾಯಚೂರಲ್ಲೊಬ್ಬ ಅಪರೂಪದ ಪೊಲೀಸ್​..!

ರಾಯಚೂರು: ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಹಾಡಿನ ಮೂಲಕ ನೆರೆದ ಪ್ರೇಕ್ಷಕರನ್ನ ಕುಣಿದು ಕುಪ್ಪಳಿಸುವಂತೆ ಮಾಡಿ ರಂಜಿಸಿದ್ದಾರೆ. ರಾಯಚೂರಿನ ಯರಗೇರಾ ಸರ್ಕಲ್ ಇನ್ಸ್​​​​ಪೆಕ್ಟರ್ ದತ್ತಾತ್ರೇಯ ಕರ್ನಾಡ, ತಮ್ಮ ಅದ್ಭುತ ಹಾಡಿನ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. ನಿನ್ನೆ ಸಂಜೆ ನಗರದ ಪಂಡಿತ್ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆದ ‘ಎಂದೂ ಮರೆಯದ ಹಾಡು’ ಕಾರ್ಯಕ್ರಮದಲ್ಲಿ ಸಿಪಿಐ ತಮ್ಮೊಳಗಿರುವ ಸಂಗಿತಗಾರನನ್ನು ಹೊರ ತಂದಿದ್ದಾರೆ.
ಮೂಲತಃ ಬೀದರ್ ಜಿಲ್ಲೆಯವರಾದ ಸಿಪಿಐ ದತ್ತಾತ್ರೆಯ, ವಿವಿಧ ಜಿಲ್ಲೆಗಳಲ್ಲಿ ಕೆಲಸ ನಿರ್ವಹಿಸಿ ಪೊಲೀಸ್ ಇಲಾಖೆಯಲ್ಲಿ ಖಡಕ್ ಅಧಿಕಾರಿಯೆಂದೇ ಗುರುತಿಸಿಕೊಂಡಿದ್ದಾರೆ. ಸದ್ಯ ಯರಗೇರಾ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್​ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ದತ್ತಾತ್ರೇಯ ಕರ್ನಾಡ ಇಲ್ಲಿಯೂ ಕೂಡ ತಮ್ಮ ಸೇವೆಯಿಂದ ಜನರ ಪ್ರೀತಿ ಗಳಿಸಿದ್ದಾರೆ. ಎಂದೂ ಮರೆಯದ ಹಾಡು ಕಾರ್ಯಕ್ರಮದಲ್ಲಿ ಕನ್ನಡ, ತೆಲುಗು ಹಾಗೂ ಹಿಂದಿಯ ಹಳೆಯ ಹಾಡುಗಳನ್ನ ಹಾಡುವ ಮೂಲಕ ನೆರೆದ ಸಾವಿರಾರು ಜನರಿಗೆ ಮನರಂಜನೆ ನೀಡಿದರು.
ಹಾಡು ಕೇಳಿದ ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿಶೋರ್ ಬಾಬು ಪ್ರತಿಕ್ರಿಯಿಸಿ, ದತ್ತಾತ್ರೇಯ ಅವರು ಒಳ್ಳೆಯ ಹಾಡುಗಾರ. ವಿಶೇಷ ಅಂದ್ರೆ ಹಾಡುಗಾರ ಮತ್ತು ಪೊಲೀಸ್ ಒಬ್ಬರಲ್ಲೇ ನೋಡುವುದು ಕಷ್ಟ. ಅವೆರಡರ ಸಂಗಮವೇ ನಮ್ಮ ಸಿಪಿಐ ದತ್ತಾತ್ರೆಯ ಎಂದು ಪ್ರಶಂಸಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv