ಕೇಬಲ್ ಅಳವಡಿಕೆಗೆ ತೋಡಿದ್ದ ಗುಂಡಿಗೆ ಬಿದ್ದು ಹಸು ಸಾವು

ಕೊಡಗು: ಹಸುವೊಂದು ಕೇಬಲ್ ಅಳವಡಿಕೆಗೆ ತೋಡಿದ್ದ ಗುಂಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ಮಡಿಕೇರಿ ತಾಲೂಕಿನ ಕಡಗದಾಳು ಗ್ರಾಮದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಮುಕ್ಕಾಟಿರ ಅಜಿತ್ ಎಂಬವರಿಗೆ ಸೇರಿದ ಹಸು ಇದಾಗಿದೆ.
ಮಡಿಕೇರಿ-ಸಿದ್ದಾಪುರ ರಸ್ತೆಯಲ್ಲಿ ಜಿಯೋ ಇಂಟರ್ನೆಟ್‌ಗಾಗಿ ಗುಂಡಿ ಅಗೆಯಲಾಗಿತ್ತು. ಆದ್ರೆ ತಿಂಗಳಾದರೂ ಮುಚ್ಚಿರಲಿಲ್ಲ. ಇದೀಗ ಹಸು ಈ ಗುಂಡಿಗೆ ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿದೆ. ಪಿಡಬ್ಲ್ಯುಡಿ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ ಅಂತಾ ಆರೋಪಿಸಿ ಜನರು ಖಾಸಗಿ ಸಂಸ್ಥೆ ಮತ್ತು ಪಿಡಬ್ಲ್ಯುಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv