ಶೌಚಾಲಯ ಗುಂಡಿಗೆ ಬಿದ್ದು ಹಸು ಸಾವು

ಚಿತ್ರದುರ್ಗ: ತೆರೆದ ಶೌಚಾಲಯದ ಗುಂಡಿಗೆ ಬಿದ್ದು ಹಸು ಮೃತಪಟ್ಟಿರುವ ಘಟನೆ ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾಮದಲ್ಲಿ ನಡೆದಿದೆ.
ದ್ಯಾಮಣ್ಣ ಎಂಬುವರ ಮನೆ ಮುಂದಿನ ಶೌಚಾಲಯದ ಗುಂಡಿಗೆ ಬಿದ್ದು ಹಸು ಮೃತಪಟ್ಟಿದೆ. ಗುಂಡಿಯಲ್ಲಿ ಬಿದ್ದ ಹಸುಗೆ ಮೇಲಕ್ಕೆ ಎದ್ದು ಬರಲು ಆಗದೇ, ಬಿದ್ದ ಜಾಗದಲ್ಲಿ ಉಸಿರುಗಟ್ಟಿ ಮೃತಪಟ್ಟಿದೆ. ದ್ಯಾಮಣ್ಣಗೆ ಗುಂಡಿ ಮುಚ್ಚುವಂತೆ ಗ್ರಾಮಸ್ಥರು ಹಲವು ಬಾರಿ ಹೇಳಿದ್ದರೂ ನಿರ್ಲಕ್ಷ್ಯ ವಹಿಸಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂರು ಅಡಿ ಅಗಲ, ಆರು ಅಡಿ ಆಳವಿರುವ ಗುಂಡಿಗೆ ಹಸು ಬಿದ್ದು ಮೃತಪಟ್ಟಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.com