ಬಲು ಅಪರೂಪ ಈ ಜೋಡಿ..! ಮದುವೆ ಫೋಟೋಗಾಗಿ ಮಾಡಿದ್ದೇನು ನೋಡಿ

ಸ್ಯಾ ಪಾಲೋ: ಮದುವೆ ಮನೆಯಲ್ಲಿ ವೆಡ್ಡಿಂಗ್ ಡ್ರೆಸ್​ನಲ್ಲಿ ನವಜೋಡಿ ಫೋಟೋಗಳಿಗೆ ಪೋಸ್​ ಕೊಡೋದನ್ನ ನೋಡೋದೇ ಚೆಂದ. ಆದ್ರೆ ಮದುವೆಯಾಗಿ ನಾಲ್ಕು ವರ್ಷ ಕಳೆದ್ರು ಮದುವೆ ಗೆಟಪ್​ನಲ್ಲಿ ಫೋಟೋಗೆ ಪೋಸ್​ ಕೊಡೊ ಜೋಡಿನ ನೀವೆಲ್ಲಾದ್ರೂ ನೋಡಿದ್ದೀರಾ..? ಅದು ಕೂಡ ದೇಶ ದೇಶ ಸುತ್ತುತ್ತಾ..! ಅಂತಹ ಒಂದು ಅಪರೂಪದ ಜೋಡಿ ಬ್ರೇಜಿಲ್​​ನಲ್ಲಿದೆ. 52 ವರ್ಷದ ಅಡೆಮಿರ್ ಅವೆಲಿನೋ ಹಾಗೂ 45 ವರ್ಷದ ಆತನ ಪತ್ನಿ ಗ್ಲಾಸಿಯಾ ಸುಡಾನ್​ 2014ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ತಮ್ಮ ಮದುವೆಯ ವೇಳೆ ಫೋಟೋ ತೆಗೆದುಕೊಳ್ಳೋಕೆ ಅವ್ರಿಗೆ ಆಗಿರಲಿಲ್ಲ. ಅದ್ಕೆ ಈಗ ವರ್ಲ್ಡ್ ಟೂರ್ ಮಾಡ್ತಾ ಮದುವೆ ಡ್ರೆಸ್​ನಲ್ಲಿ ಡಿಫರೆಂಟ್ ಡಿಫರೆಂಟ್ ಪಿಕ್ಚರ್ಸ್ ತೆಗೆಸಿಕೊಳ್ತಿದ್ದಾರೆ.

ವಿವಿಧ ದೇಶಗಳಿಗೆ ಭೇಟಿ ನೀಡಿ ಅಲ್ಲಿ ಮದುವೆ ಡ್ರೆಸ್​ನಲ್ಲಿ ಪೋಸ್​ ಕೊಟ್ಟು ಫೋಟೋಗಳನ್ನ ತೆಗೆದುಕೊಳ್ಳುತ್ತಾ ಸಖತ್ತಾಗಿ ಮಿಂಚಿದ್ದಾರೆ. ಯೂರೋಪ್​ನಿಂದ ಆಸ್ಟ್ರೇಲಿಯಾವರೆಗೂ ಪ್ರಯಾಣ ಬೆಳೆಸಿದ ಈ ಜೋಡಿ ಬ್ರೆಜಿಲ್ ವ್ಯಾಲೆಂಟೈನ್ಸ್ ಡೇ ದಿನವಾದ ನಿನ್ನೆ ವಾಪಸ್ ಬಂದಿದ್ದಾರೆ. ತಮ್ಮ ಸ್ವಂತ ಊರಲ್ಲೂ ಫೋಟೋಗೆ ಪೋಸ್ ಕೊಟ್ಟು ಕ್ಲಿಕ್ಕಿಸಿಕೊಂಡಿದ್ದಾರೆ. ವರ್ಲ್ಡ್ ಟೂರ್ ವೆಡ್ಡಿಂಗ್ ಆಲ್ಬಂ ಅನ್ನ ಫೇಸ್​ಬುಕ್ ಹಾಗೂ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿ ನೀವೂ ಈ ರೀತಿ ಮಾಡಿ ಅಂತ ಹೊಸ ಜೋಡಿಗಳಿಗೆ ಸಲಹೆಯನ್ನೂ ಕೊಡ್ತಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv