ಕೌಟುಂಬಿಕ ಕಲಹ: ಪತ್ನಿ ಕೊಲೆಗೈದ ಪತಿ ನೇಣಿಗೆ ಶರಣು

ಚಿತ್ರದುರ್ಗ: ಗಂಡ ಹೆಂಡತಿ ಮಧ್ಯೆ ಆಗಾಗ ಕೌಟುಂಬಿಕ ಜಗಳಗಳಾಗುತ್ತಿತ್ತು. ಇದು ವಿಕೋಪಕ್ಕೆ ತಿರುಗಿ ಪತ್ನಿ ಕೊಲೆಗೈದು, ಪತಿಯೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗುವಂತೆ ಮಾಡಿದೆ.

ಚಳ್ಳಕೆರೆ ತಾಲ್ಲೂಕಿನ ಅಡವಿ ಚಕ್ಕೆನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪತಿ ಉಮೇಶ್(35) ಮತ್ತು ಪತ್ನಿ ಪಾರ್ವತಿ(28) ನಡುವೆ ಪ್ರತಿನಿತ್ಯವೂ ಜಗಳ ನಡೆಯುತ್ತಿತ್ತು. ಆದ್ರೆ, ನಿನ್ನೆ ರಾತ್ರಿ ಜಗಳ ತಾರಕಕ್ಕೆ ಹೋಗಿದ್ದು, ಪತಿ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ, ಪತ್ನಿ ಕೊಲೆಯನ್ನ ಖಚಿತ ಪಡಿಸಿಕೊಂಡು ನಂತ್ರ ತಾನೂ ನೇಣಿಗೆ ಶರಣಾಗಿದ್ದಾನೆ. ಈ ಮಧ್ಯೆ, ಜಗಳ ತಡೆಯಲು ಬಂದ ತಾಯಿಯ ಮೇಲೂ ಉಮೇಶ್ ಹಲ್ಲೆ ಮಾಡಿದ್ದು ತಾಯಿ ನಿಂಗಮ್ಮನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ತಡರಾತ್ರಿ ಘಟನೆ ನಡೆದಿದ್ದರೂ ಯಾವೊಬ್ಬ ಗ್ರಾಮಸ್ಥರಾಗಲಿ, ಕುಟುಂಬಸ್ಥರಾಗಲೀ ಪೊಲೀಸರಿಗೆ ಮಾಹಿತಿ ತಿಳಿಸಿರಲಿಲ್ಲ. ಹಾಗೆಯೇ, ಶವಸಂಸ್ಕಾರಕ್ಕೆ ಮುಂದಾಗಿದ್ದರು ಎನ್ನಲಾಗಿದೆ. ವಿಷಯ ತಿಳಿದ ಪೊಲೀಸರು ಶವಗಳನ್ನು ವಶಕ್ಕೆ ಪಡೆದು ತನಿಖೆಗೆ ಮುಂದಾಗಿದ್ದಾರೆ. ಈ ಸಂಬಂಧ ಚಳ್ಳಕೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv