ಕೌಟುಂಬಿಕ ಕಲಹಕ್ಕೆ ಜೀವ ಕಳೆದುಕೊಂಡ ದಂಪತಿ

ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲೂಕು ಚಿಕ್ಕಕಣಿವೆಕಲ್ಲು ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ದಂಪತಿ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 35 ವರ್ಷದ ಬಾಲರಾಜು ಮತ್ತು ಪತ್ನಿ 20 ವರ್ಷದ ಚಲ್ಲಕಣ್ಣು ಮೃತ ದಂಪತಿ. ಈ ಘಟನೆಯಿಂದ ಊರಿನಲ್ಲಿ ನೀರವ ಮೌನ ಮನೆಮಾಡಿದೆ. ಬಂಗಾರ ಪೇಟೆ ಪೊಲೀಸ್​ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.