ಲಕ್ಷ ಲಕ್ಷ ಖರ್ಚಾದ್ರೂ ಮತ ಹಾಕ್ಬೇಕು ಅಂತ ಯೂರೋಪ್​​ನಿಂದ ಬಂದ ದಂಪತಿ

ಉತ್ತರ ಕನ್ನಡ: ಇಂದು ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆಗೆ ಮತದಾನ ನಡೆಯುತ್ತಿದೆ. ಗಂಡ ಹೆಂಡತಿಯಿಬ್ಬರು ಯುರೋಪ್​​ನ ಜೆಕ್ ಗಣರಾಜ್ಯದಿಂದ ರಾಜ್ಯಕ್ಕೆ ಬಂದು ಮತ ಚಲಾಯಿಸಿದ್ದಾರೆ. ಸೌಮ್ಯ ಮತ್ತು ವಿನೀತ್ ಯುರೋಪ್​​ನಿಂದ ಬಂದು ಮತದಾನ ಮಾಡಿದವರು. ಶಿರಸಿ ನಿವಾಸಿಯಾದ ಸೌಮ್ಯಾ ಮತಗಟ್ಟೆ ಸಂಖ್ಯೆ 66ರಲ್ಲಿ  ವೋಟ್​ ಹಾಕಿದ್ದಾರೆ. ಇನ್ನು, ಪತಿ ವಿನೀತ್ ದಾವಣಗೆರೆಯ ಹರಿಹರದಲ್ಲಿ ಮತ ಚಲಾಯಿಸಿದ ಬಳಿಕ ಶಿರಸಿಗೆ ಬಂದಿದ್ದಾರೆ.

ಸೌಮ್ಯ ಮತ್ತು ವಿನೀತ್ ಯುರೋಪ್​​​​​​​​ನಲ್ಲಿ ವಿಜ್ಞಾನಿಗಳಾಗಿ ಕೆಲಸ ಮಾಡ್ತಿದ್ದಾರೆ. ಮತದಾನದ ಬಳಿಕ ಮಾತನಾಡಿದ ಸೌಮ್ಯ, ಮತ ಚಲಾಯಿಸೋದು ನಮ್ಮ ಹಕ್ಕು. ಮತದಾನದಿಂದ ನಾವು ಭಾರತೀಯರನ್ನೋ ಹೆಮ್ಮೆ ಮೂಡುತ್ತದೆ ಎಂದರು. ಮತ ಹಾಕಿದ್ರೆ ಮಾತ್ರ ನಾವು ಜನಪ್ರತಿನಿಧಿಗಳನ್ನು ಪ್ರಶ್ನಿಸಬಹುದು. ಮತ ಹಾಕದೆ ನಾವು ಅವರನ್ನ ಟೀಕಿಸೋದು ಸರಿ ಅಲ್ಲ. ಲಕ್ಷ ಲಕ್ಷ ಖರ್ಚಾದ್ರೂ ಮತ ಹಾಕ್ಬೇಕು ಅಂತ ಬಂದಿದ್ದೀವಿ ಎಂದು ಸೌಮ್ಯ ಹೇಳಿದ್ರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv