ದಕ್ಷಿಣ ಭಾರತದ ಕುಂಭಮೇಳಕ್ಕೆ ದಿನಗಣನೆ: ಅಧಿಕಾರಿಗಳಿಗೆ ಸವಾಲಾದ ‘ಪ್ರಸಾದ ವಿನಿಯೋಗ’

ಮೈಸೂರು: ಜಿಲ್ಲೆಯ ತಿ. ನರಸಿಪುರ ತಾಲೂಕಿನ ತಿರುಮಕೂಡಲಿನಲ್ಲಿ ನಡೆಯುವ ಕುಂಭಮೇಳಕ್ಕೆ ದಿನಗಣನೆ ಶುರುವಾಗಿದೆ. ತ್ರಿವೇಣಿ ಸಂಗಮದಲ್ಲಿ 3 ವರ್ಷಗಳಿಗೊಮ್ಮೆ ಪುಣ್ಯ ಪೂಜೆ, ಸ್ನಾನ ನಡೆಯುತ್ತದೆ. ಜಿಲ್ಲಾಡಳಿತ ಕುಂಭಮೇಳಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕುಂಭಮೇಳದಲ್ಲಿ ಪ್ರಸಾದ ವಿನಿಯೋಗ ಮಾಡೋದೇ ಅಧಿಕಾರಿಗಳಿಗಿಗೆ ದೊಡ್ಡ ಟಾಸ್ಕ್ ಆಗಿದೆ.

ಸರ್ಕಾರದ ವತಿಯಿಂದ ನೀಡಲಾಗುವ ಪ್ರಸಾದಕ್ಕೆ ಪ್ರಾಥಮಿಕ ಹಂತದಿಂದಲೂ ಸೂಪರ್ವೈಸಿಂಗ್ ನಡೆಯಲಿದೆ. ಪ್ರಸಾದ ತಯಾರಿಕಾ ಕೊಣೆಯಲ್ಲಿ ಸಿಸಿಟಿವಿ ಅಳವಡಿಸಿ ವೀಕ್ಷಣೆ ಮಾಡಲಾಗುತ್ತದೆ. ಪ್ರಸಾದ ತಯಾರಾದ ಬಳಿಕ ಪ್ರಯೋಗಾಲಯಕ್ಕೆ ಸ್ಯಾಂಪಲ್ ರವಾನೆಗೆ ವ್ಯವಸ್ಥೆ ಮಾಡಬೇಕಿದೆ. ಸ್ಥಳದಲ್ಲೇ ಪ್ರಯೋಗಾಲಯ ಇಲ್ಲದಿರುವುದರಿಂದ ಆರೋಗ್ಯಾಧಿಕಾರಿಗಳಿಗೆ ಸ್ಯಾಂಪಲ್ ಪರೀಕ್ಷೆ ಮಾಡುವುದು ಕೊಂಚ ಸಮಸ್ಯೆಯಾಗಿದೆ. ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಭಕ್ತರು ಕುಂಭಮೇಳಕ್ಕೆ ಸೇರುವ ನಿರೀಕ್ಷೆ ಇದೆ.

ಸುಳ್ವಾಡಿ ಮಾರಮ್ಮ ಹಾಗೂ ಚಿಂತಾಮಣಿಯ ಗಂಗಮ್ಮ ದೇವಸ್ಥಾನಗಳ ಪ್ರಸಾದ ದುರಂತ ಹಿನ್ನೆಲೆ ಕುಂಭಮೇಳದಲ್ಲಿ ಭಾಗವಹಿಸುವ ಭಕ್ತರ ಆರೋಗ್ಯ ರಕ್ಷಣೆ ಅಧಿಕಾರಿಗಳಿಗೆ ಚಾಲೆಂಜ್ ಎದುರಾಗಿದೆ. ಪ್ರಸಾದ ವಿನಿಯೋಗ ಮಾಡುವ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವುದು ಅಧಿಕಾರಿಗಳಿಗೆ  ದೊಡ್ಡ ಸವಾಲಾಗಿದೆ.

ಇನ್ನು ಭಕ್ತರು ಹೊರಗಡೆಯಿಂದ ಪ್ರಸಾದ ವಿನಿಯೋಗ ಮಾಡುವುದಕ್ಕೆ ಬ್ರೇಕ್ ಹಾಕಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಒಂದು ವೇಳೆ ಭಕ್ತರು ಪ್ರಸಾದ ಹಂಚುವುದಾದರೆ ಮುಚ್ಚಳಿಕೆ ಬರೆಸಿಕೊಳ್ಳವ ಬಗ್ಗೆಯೂ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಆಕಸ್ಮಿಕವಾಗಿ ಪ್ರಸಾದ ಹಂಚುವಾಗ ಅವಘಡವಾದರೆ ಭಕ್ತರು ತಾವೇ ಜವಾಬ್ದಾರರೆಂದು ಮುಚ್ಚಳಿಕೆ ಬರೆದುಕೊಡುವಂತೆ ಮಾಡುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಲಕ್ಷಾಂತರ ಭಕ್ತರು ಸೇರುವ ಸ್ಥಳದಲ್ಲಿ ಎಲ್ಲವೂ ಸೂಕ್ಷ್ಮವಾಗಿ ಮಾನಿಟರ್ ಮಾಡಲು ಆಗುತ್ತಾ ಅನ್ನೋದು ಕಾದು ನೋಡಬೇಕು.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv