ಜಿಲ್ಲೆಯ ಅತ್ಯುತ್ತಮ ಸರ್ಕಾರಿ ಶಾಲೆಗೆ 10 ಕಂಪ್ಯೂಟರ್ಸ್​ ನೀಡಿದ ಖಾಸಗಿ ಕಂಪನಿ

ರಾಮನಗರ: ಕಾರ್ಪೊರೇಟ್​ ಸಾಮಾಜಿಕ ಹೊಣೆಗಾರಿಕೆ ಯೋಜನೆ ಅಡಿ ಈಸ್ಟರ್ನ್​ ಕ್ಯಾಂಡಿಮೆಂಟ್ಸ್​ ಸಂಸ್ಥೆ ಜಿಲ್ಲೆಯ ಮಾಗಡಿ ತಾಲೂಕಿನ ಕುದೂರು ಸರ್ಕಾರಿ ಪ್ರೌಢ ಶಾಲೆಗೆ 10 ಕಂಪ್ಯೂಟರುಗಳನ್ನ​ ಕೊಡುಗೆಯಾಗಿ ನೀಡಿದ್ದು, ಹೊಸ ಕಂಪ್ಯೂಟರ್​ ಪ್ರಯೋಗಾಲಯವನ್ನು ಇಂದು ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮವನ್ನ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಫಿರೋಜ್​​ ಮೀರನ್​ ಉದ್ಘಾಟಿಸಿದ್ರು.
ನಂತರ ಮಾತನಾಡಿದ ಅವರು, ನಮ್ಮ ಸಂಸ್ಥೆ ಸಾಮಾಜಿಕ ಜವಾಬ್ದಾರಿ ನಿರ್ವಹಿಸುವ ಕಾರ್ಯ ಮಾಡುತ್ತಿದೆ. ಇನ್ನು ರಾಮನಗರ ಜಿಲ್ಲೆಯಲ್ಲಿ ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿರುವ ಸರ್ಕಾರಿ ಶಾಲೆ ಇದಾಗಿದ್ದು, ಇಲ್ಲಿ ಮೌಲ್ಯಾಧಾರಿತ ಶಿಕ್ಷಣ ಮಕ್ಕಳಿಗೆ ಸಿಗುತ್ತಿದೆ. ಅದಕ್ಕಾಗಿ ಈ ಶಾಲೆಯನ್ನ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.
ಕುದೂರು ಸರ್ಕಾರಿ ಶಾಲೆಯಲ್ಲಿ ಸುಮಾರು 500ಕ್ಕೂ ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ಎಲ್ಲಾ ವರ್ಗದ ಮಕ್ಕಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅದಕ್ಕಾಗಿ ಸರ್ಕಾರಿ ಶಾಲೆಯ ಮಕ್ಕಳು ಖಾಸಗಿ ಶಿಕ್ಷಣ ಸಂಸ್ಥೆಯ ಮಕ್ಕಳಿಗಿಂತ ಕಡಿಮೆ ಇಲ್ಲ. ಅದಕ್ಕಾಗಿ ಎಲ್ಲರಿಗೂ ಸಮಪಾಲಿನ ಶಿಕ್ಷಣ ದೊರಕಬೇಕು ಎಂದು ಶಾಲೆಗೆ ಸುಮಾರು 10 ಕಂಪ್ಯೂಟರ್​ಗಳನ್ನ ಕೊಡುಗೆಯಾಗಿ ತಮ್ಮ ಕಂಪನಿ ಕೊಟ್ಟಿದೆ ಎಂದು ಫಿರೋಜ್​​ ಮೀರನ್​ ಹೇಳಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv