ಹೊತ್ತಿ ಉರಿಯುತ್ತಿದ್ದ ಕಟ್ಟಡದಿಂದ 3 ಮಕ್ಕಳನ್ನ ಕ್ಯಾಚ್​ ಹಿಡಿದು ರಕ್ಷಿಸಿದ ಪೊಲೀಸರು

ಬೆಂಕಿ ಅವಘಡದಿಂದಾಗಿ ಹೊತ್ತಿ ಉರಿಯುತ್ತಿದ್ದ ಕಟ್ಟಡದಿಂದ ಮೂವರು ಮಕ್ಕಳನ್ನು ರಕ್ಷಿಸುವ ಮೂಲಕ ಅಮೇರಿಕಾದ ಪೊಲೀಸರು ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇಲ್ಲಿನ ಲೋವಾದ ಡೆಸ್​ ಮಾಯ್ನೆಸ್​​​ನಲ್ಲಿ ಕಟ್ಟಡವೊಂದರಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಪೊಲೀಸರು ಸ್ಥಳಕ್ಕಾಗಮಿಸಿದಾಗ ದಟ್ಟ ಹೊಗೆ ಆವರಿಸಿದ್ದರಿಂದ ಮೂರನೇ ಮಹಡಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮಕ್ಕಳನ್ನ ಮೂರನೇ ಮಹಡಿಯ ಕಿಟಕಿಯಿಂದ ಕೆಳಗೆ ಎಸೆಯುವಂತೆ ಮಾಡಲಾಯ್ತು. ಅಧಿಕಾರಿಗಳಾದ ಕೋಲ್​​​ ಜಾನ್​ಸನ್​​​​, ಕ್ರೆಗ್​​ ವಾಸ್​ಕ್ವೆಸ್​​, ಟೈಲರ್​ ಕೆಲ್ಲಿ ಹಾಗೂ ಕೇಸಿ ಸ್ಯಾಂಡರ್ಸ್​ ಮಕ್ಕಳನ್ನ ಕ್ಯಾಚ್​ ಹಿಡಿದು ರಕ್ಷಣೆ ಮಾಡಿದ್ದಾರೆ. ಈ ದೃಶ್ಯ ಸಿಬ್ಬಂದಿಯೊಬ್ಬರ ಬಾಡಿಕ್ಯಾಮ್​​ನಲ್ಲಿ ಸೆರೆಯಾಗಿದ್ದು, ಡೆಸ್​​ ಮಾಯ್ನೆಸ್​​ ಪೊಲೀಸರು ಈ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ಪೊಲೀಸರ ಸಮಯಪ್ರಜ್ಞೆ ಹಾಗೂ ಧೈರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Early this morning, DMPD officers responded to assist DMFD with a structure fire at an apartment complex in the 3700 block of MLK Parkway. Officers arrived to find that heavy smoke was preventing their access to the 3rd floor.Senior Police Officers Cole Johnson, Craig Vasquez, Tyler Kelley, and Casey Sanders quickly positioned themselves outside the building, and caught children that were dropped to them from a 3rd floor window. All are well…Please join us in thanking these officers, and those who serve with them, for leaving their homes every day to help make Des Moines the safe and secure city that it is!

Posted by Des Moines Police on Tuesday, March 19, 2019