ಹೆಲ್ಮೆಟ್ ಹಾಕಿಲ್ಲ ಅಂತ ಹೊಡೆದಿದ್ದ ಕಾನ್ಸ್​ಟೇಬಲ್ ಸಸ್ಪೆಂಡ್

ಉತ್ತರಪ್ರದೇಶ: ಸಿಎಂ ಯೋಗಿ ಆದಿತ್ಯನಾಥ್ ನಾಡು ಉತ್ತರಪ್ರದೇಶದಲ್ಲಿ, ಪೊಲೀಸರು ಇತ್ತೀಚಿಗೆ ಕಾನೂನನ್ನ ತಮ್ಮ ಕೈಗೆ ತೆಗೆದುಕೊಳ್ತಿದ್ದಾರೆ ಅನ್ನೋ ಆರೋಪಗಳು ಕೇಳಿ ಬರ್ತಿವೆ. ಇದಕ್ಕೆ ಪುಷ್ಠಿ ನೀಡುವಂಥ ಘಟನೆಗಳೂ ನಡೀತಾನೆ ಇವೆ.
ಕಾರ್ ನಿಲ್ಲಿಸಲು ನಿರಾಕರಿಸಿದಕ್ಕೆ ಮೊಬೈಲ್​ ಕಂಪನಿ ಉದ್ಯೋಗಿಯನ್ನ ಕಾನ್ಸ್​ಟೇಬಲ್ ಓರ್ವ ಗುಂಡಿಟ್ಟು ಕೊಂದಿದ್ದ. ಇದರ ಬೆನ್ನಲ್ಲೇ ಮತ್ತೊರ್ವ ಕಾನ್ಸ್​ಟೇಬಲ್ ಹೆಲ್ಮೆಟ್ ಧರಿಸದ ವಾಹನ ಸವಾರನ ಮೇಲೆ ಹಲ್ಲೆ ನಡೆಸಿದ್ದ ವಿಡಿಯೋ ವೈರಲ್ ಆಗಿತ್ತು. ಇದೀಗ ಹಲ್ಲೆ ನಡೆಸಿದ ಕಾನ್ಸ್​ಟೇಬಲ್ ಕಮಲೇಶ್ ಕುಮಾರ್​​ನನ್ನ ಅಮಾನತು ಮಾಡಲಾಗಿದೆ.
ಸುಲ್ತಾನ್​ಪುರದ ಕಾನ್ಸ್​ಟೇಬಲ್ ಕಮಲೇಶ್, ಹೆಲ್ಮೆಟ್ ಧರಿಸದೇ ಹೋಗ್ತಿದ್ದ ವಾಹನ ಸವಾರನ ಮೇಲೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗಾ ಹಲ್ಲೆ ಮಾಡಿದ್ದರು. ಕೈಯಲ್ಲಿ ಪೊಲೀಸ್ ಲಾಠಿಯಿಂದ ಬಾಸುಂಡೆ ಬರೋ ಹಾಗೆ ಬಾರಿಸಿದ್ರು. ಇದನ್ನ ಅಲ್ಲೇ ಇದ್ದ ಸ್ಥಳೀಯರು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ವಿಡಿಯೋ ವೈರಲ್ ಆಗ್ತಿದ್ದಂತೆ ಎಚ್ಚೆತ್ತ ಪೊಲೀಸ್ ಇಲಾಖೆ, ಆರೋಪಿ ಕಾನ್ಸ್​ಟೇಬಲ್ ಕಮಲೇಶ್​ನನ್ನ ಅಮಾನತು ಮಾಡಿದೆ. ಅಲ್ಲದೆ, ಆತನ ವಿರುದ್ಧ ಎಫ್​ಐಆರ್ ಕೂಡ ದಾಖಲು ಮಾಡಿದೆ.
ಇದೇ ವಿಡಿಯೋನಲ್ಲಿ ಮತ್ತೊಬ್ಬ ವ್ಯಕ್ತಿ ಕೂಡ ವಾಹನ ಸವಾರನ ಮೇಲೆ ಹಲ್ಲೆ ಮಾಡಿದ್ದ. ಆತ ಯಾರು ಅಂತ ಪತ್ತೆ ಹಚ್ಚಲು ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸ್ತಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: conatct@firstnews.tv