ಧಾರವಾಡ ಕಟ್ಟಡ ಕುಸಿತ ಪ್ರಕರಣ, ಕನ್ಸ್​ಟ್ರಕ್ಟಿವ್ ಇಂಜಿನೀಯರ್ ಅರೆಸ್ಟ್..!

ಧಾರವಾಡ: ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಭಂದಪಟ್ಟಂತೆ ಬಿಲ್ಡಿಂಗ್ ಕನ್ಸ್​ಟ್ರಕ್ಟಿಂಗ್ ಇಂಜನೀಯರ್ ವಿವೇಕ್ ಪವಾರ್ ಎಂಬುವವರನ್ನು ಅರೆಸ್ಟ್ ಮಾಡಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಎಸ್​ಪಿ ಎಮ್.ಎನ್.ನಾಗರಾಜ್ ನಗರದಲ್ಲಿ ಹೇಳಿದ್ದಾರೆ. ಘಟನೆ ನಂತರ ತಲೆಮರೆಸಿಕೊಂಡಿದ್ದ ವಿವೇಕ ಪವಾರ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿನ ಲಾಡ್ಜ್ ವೊಂದರಲ್ಲಿ ಪೊಲೀಸರ ವಶಕ್ಕೆ ಸಿಕ್ಕಿ ಬಿದ್ದಿದ್ದಾನೆ. ಅಂದ್ಹಾಗೆ ಉಳಿದ ಆರೋಪಿಗಳು ನಾಪತ್ತೆಯಾಗಿದ್ದಾರೆ, ಶೀಘ್ರದಲ್ಲೇ ಅವರ ಬಂಧನ ಸಹ ಆಗುವುದು ಎಂದು ಎಸ್​ಪಿ ಎಮ್.ಎನ್.ನಾಗರಾಜ್ ಭರವಸೆ ನೀಡಿದ್ದಾರೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv