ಕಟ್ಟಡ ಕುಸಿತ, ಘಟನಾ ಸ್ಥಳಕ್ಕೆ ಹೆಚ್. ಕೆ . ಪಾಟೀಲ್ ಭೇಟಿ

ಧಾರವಾಡ: ನಿರ್ಮಾಣ ಹಂತದ ಕಟ್ಟಡ ಕುಸಿತ ಘಟನಾ ಸ್ಥಳಕ್ಕೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್. ಕೆ . ಪಾಟೀಲ್ ಭೇಟಿ ನೀಡಿದ್ದರು. ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಹೆಚ್. ಕೆ . ಪಾಟೀಲ್, ಅವಶೇಷದಲ್ಲಿ ಇನ್ನೂ 6-7 ಜನ ಇರಬಹುದು. ಇನ್ನೂ ಒಂದು ದಿನ ಕಾರ್ಯಾಚರಣೆ ನಡೆಯಬಹುದು. ಮಡಿದವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತೇನೆ. ಅವರ ಕುಟುಂಬಸ್ಥರಿಗೆ ದುಃಖ ಬರಿಸುವ ಶಕ್ತಿ ಬರಲಿ ಅಂತಾ ಹಾರೈಸುತ್ತೇನೆ. ಸಾರ್ವಜನಿಕರ ಸಹಕಾರ ಮನೋಭಾವ ನಮ್ಮ ಧಾರವಾಡದ ಸಂಸ್ಕೃತಿ ಅದು. ಅವರಿಗೆ ಧನ್ಯವಾದ ಹೇಳುತ್ತೇನೆ. ಕಾರ್ಮಿಕರ ಕಲ್ಯಾಣಕ್ಕಾಗಿ ಕಾನೂನು ಇದೆ. ಸತ್ತವರಿಗೆ ₹ 5 ಲಕ್ಷ ಪರಿಹಾರ ಕೊಡುವಂತ ಕಾನೂನು ಇದೆ. ಗಾಯಾಳುಗಳಿಗೆ ಚಿಕಿತ್ಸೆ ಅಷ್ಟೇ ಅಲ್ಲ ಅವರಿಗೆ ಸೂಕ್ತ ಪರಿಹಾರ ಕೊಡುವ ಕಾನೂನು ಇದೆ. ಸರ್ಕಾರದ ಇಲಾಖೆಯ ಕಾರ್ಯದರ್ಶಿಗಳಿಗೆ ಆಗ್ರಹಿಸುತ್ತೇನೆ. ತಕ್ಷಣ ಬಂದು ಗಾಯಾಳುಗಳಿಗೆ, ಮೃತರಿಗೆ ಪರಿಹಾರ ಮುಟ್ಟಿಸುವ ಕೆಲಸ ಮಾಡಬೇಕು. ಇನ್ನೂ ಒಳಗಡೆ ಇದ್ದಾರೆ ಅನ್ನೋ ಹೋಪ್ಸ್ ಅಲ್ಲಿದ್ದಾರೆ. ಈ ಹೋಪ್ಸ್ ಸತ್ಯವಾಗಲಿ. ಅವರು ಬದುಕಿ ಬರಲಿ. ನಿನ್ನೆ ದಂಪತಿಗಳು, ಮತ್ತು ಯುವಕ ಬದುಕಿ ಬಂದಿರೋದು ನಿಜಕ್ಕೂ ಪವಾಡ. ಇವರು ಪಾರಾಗಿ ಬಂದಿದ್ದು ಸಮಾಧಾನ ತಂದಿದೆ. ಇನ್ನು ಮುಂದೆ ಇಂತಹ ಘಟನೆಯಾಗದಂತೆ ಸರ್ಕಾರ ಎಚ್ಚರ ವಹಿಸುತ್ತದೆ ಎಂದು ಹೇಳಿದರು.

ಸಂತ್ರಸ್ತರ ಅಂಗಡಿ ಮುಗ್ಗಟ್ಟು ನಾಶದ ವಿಚಾರವಾಗಿಮಾತನಾಡಿದ ಹೆಚ್. ಕೆ . ಪಾಟೀಲ್, ಇನ್ಸುರೆನ್ಸ್ ಡಿಪಾರ್ಟ್​​​ಮೆಂಟ್​​​​​ನವರು ಕಾಳಜಿ ಮಾಡಲೆಬೇಕಾಗುತ್ತೆ. ತನಿಖೆ ವಿಚಾರವಾಗಿ ಎಲ್ಲಾ ಲೋಪಗಳನ್ನ ಪರಿಗಣಿಸಿ ಸಮಗ್ರವಾಗಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಸಿಸಿ ಅಂದ್ರೆ ಯಾರೋ ದುಡ್ಡು ಕೊಡೋದು, ಯಾರೋ ಸಿಸಿ ಕೊಡೋ ವ್ಯವಸ್ಥೆ ಇದೆ. ಇದು ಆಗಬಾರದು, ಮುನ್ನೆಚ್ಚರಿಕೆ ಕ್ರಮ ವಹಿಸಬೇಕಾಗಿದೆ ಎಂದು ಹೇಳಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv