ವಿದ್ಯುತ್​ ಶಾಕ್:​ ಮಹಿಳಾ ಮುಖ್ಯಪೇದೆ ಸಾವು

ಕಲಬುರ್ಗಿ: ವಿದ್ಯುತ್ ಸ್ಪರ್ಶಿಸಿ ಡಿಸಿಆರ್​ಬಿ ಮಹಿಳಾ ಮುಖ್ಯಪೇದೆ ಸಾವನ್ನಪ್ಪಿರುವ ಘಟನೆ ಕಲಬುರ್ಗಿ ಪಟ್ಟಣದ ಶಿವಶಕ್ತಿ ನಗರದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಡಿಸಿಅರ್​ಬಿ ಮುಖ್ಯಪೇದೆ ಸುಜಾತಾ‌ ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ 9ರ ಸುಮಾರಿಗೆ ಇನ್ವರ್ಟರ್ ಪ್ಲಗ್ ಇನ್ ಮಾಡುವಾಗ ಕರೆಂಟ್​ ಶಾಕ್​ ಹೊಡೆದಿರುವುದು ಬೆಳಕಿಗೆ ಬಂದಿದೆ. ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.