ವಿಧಾನಸಭೆ ಚುನಾವಣೆಗೆ ಮೊದಲ ಬಲಿ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು. ಸದ್ಯಕ್ಕೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆಡಳಿತ ಯಂತ್ರ ಸಕಲ ರೀತಿಯಲ್ಲಿ ಸಜ್ಜಾಗಿದೆ. ಅದು ಬಿಗಿ ಬಂದೋಬಸ್ತಿನಿಂದ ಹಿಡಿದು, ಅಕ್ರಮಗಳನ್ನು ತಡೆಗಟ್ಟುವವರೆಗೂ ಆಡಳಿತ ಯಂತ್ರ ಶಕ್ತಿಮೀರಿ ಯತ್ನಿಸುತ್ತಿದೆ. ಅದರಲ್ಲೂ ಪೊಲೀಸರು ಹೆಚ್ಚು ಜಾಗೃತರಾಗಿದ್ದಾರೆ. ಇಂತಹ ಸಂದರ್ಭದಲ್ಲೇ ಅನಾಹುತವೊಂದು ಘಟಿಸಿದೆ.

ರಾಮನಗರ ತಾಲೂಕು ಬಿಡದಿಯ ಹೆಜ್ಜಾಲ ಚೆಕ್ ಪೋಸ್ಟ್​ ಬಳಿ ಮುಖ್ಯಪೇದೆಯೊಬ್ಬರು ಕಾರನ್ನು ನಿಲ್ಲಿಸಿ, ತಪಾಸಣೆ ಮಾಡುತ್ತಿದ್ದರು. ಆದರೆ ದುರ್ದೈವ ಗೂಡ್ಸ್ ಲಾರಿ ಯೊಂದು ಅವರಿಗೆ ಡಿಕ್ಕಿ ಹೊಡೆದು ಅನಾಹುತವಾಗಿದೆ.

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಈ ತಪಾಸಣೆ ನಡೆಸಲಾಗುತ್ತಿತ್ತು. ಈ ವೇಳೆ ಹಿಂಬದಿಯಿಂದ ಅತಿ ವೇಗವಾಗಿ ಬಂದ ಗೂಡ್ಸ್ ಲಾರಿಯೊಂದು ತಪಾಸಣೆ ನಡೆಸುತ್ತಿದ್ದ ಪೇದೆಗೆ ಡಿಕ್ಕಿ ಹೊಡೆದು, ಪೇದೆ ಸಾವನ್ನಪ್ಪಿದ್ದಾರೆ. ಬಿಡದಿ ಪೊಲೀಸ್ ಠಾಣೆಯ ಮುಖ್ಯಪೇದೆ ಮಹಾಲಿಂಗ ಮೃತ ದುರ್ದೈವಿ.

Leave a Reply

Your email address will not be published. Required fields are marked *