ಪ್ರೀತಿಗೆ ಜಾತಿ ಅಡ್ಡ ಬಂದ್ರೂ, ಮದುವೆಯಾದ ಪೊಲೀಸ್ ಜೋಡಿ..!

ಮೈಸೂರು:  ಪ್ರೀತಿಯಲ್ಲಿ ಬಿದ್ದಿದ್ದ ಸಿದ್ದರಾಜು ಹಾಗೂ ಶ್ವೇತರಾಣಿ ಎಂಬ ಪೊಲೀಸ್ ಪೇದೆ ಜೋಡಿ ಪೋಷಕರ ವಿರೋಧದ ನಡುವೆ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.

ಬೆಂಗಳೂರಿನ ವಿವೇಕಾನಂದನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ  ವೇಳೆ ಪ್ರೀತಿಗೆ ಸಿಲುಕಿದ್ದ ಈ ಜೋಡಿಯ ಮದುವೆಗೆ ಜಾತಿ ಅಡ್ಡ ಬಂದಿತ್ತು. ಅದಲ್ಲದೆ ಯುವತಿ ಮನೆಯವರಿಂದ ಮದುವೆಗೆ ವಿರೋಧ ವ್ಯಕ್ತವಾಗಿತ್ತು. ಈ  ಹಿನ್ನೆಲೆಯಲ್ಲಿ ಪೇದೆಗಳು ತಮ್ಮ ರಕ್ಷಣೆಗಾಗಿ ಒಡನಾಡಿ ಸಂಸ್ಥೆಯ ಮೊರೆಹೋಗಿದ್ದರು. ಆಗ ಒಡನಾಡಿ ಸೇವಾ ಸಂಸ್ಥೆ  ಮುಂದೆ ನಿಂತು, ಕೊಳ್ಳೇಗಾಲದ ಬೌದ್ಧಪೀಠದ ಬಂತೇಜಿ ರತ್ನ ಸಮ್ಮುಖದಲ್ಲಿ, ಪೊಲೀಸ್ ಪೇದೆಗಳ ಸರಳ ಮದುವೆ ಮಾಡಿಸಿದ್ದಾರೆ. ಪೇದೆ ಶ್ವೇತರಾಣಿ ಮೂಲತಃ ಹಾಸನ ಜಿಲ್ಲೆ ಹೊಳೆನರಸೀಪುರದ ತಾತನಹಳ್ಳಿಯ ಗಂಗೇಗೌಡ, ಲಕ್ಷ್ಮಮ್ಮ ದಂಪತಿ ಪುತ್ರಿ. ಇನ್ನ, ಪೇದೆ  ಸಿದ್ದರಾಜು ಮೈಸೂರು, ತಾಲೂಕಿನ ಸಿದ್ಧರಾಮನ ಹುಂಡಿ ಗ್ರಾಮದ ಮಹದೇವು, ಸುಂದ್ರಮ್ಮ ದಂಪತಿ ಪುತ್ರ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv