ಶಿವಳ್ಳಿಗೆ ಸಚಿವ ಸ್ಥಾನ ಕೈ ತಪ್ಪಿದಕ್ಕೆ ಬೆಂಬಲಿಗರ ಆಕ್ರೋಶ

ಧಾರವಾಡ: ಕುಂದಗೋಳ ಕಾಂಗ್ರೆಸ್​ ಶಾಸಕ ಸಿ.ಎಸ್. ಶಿವಳ್ಳಿ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದಕ್ಕೆ ಕುಂದಗೋಳದಲ್ಲಿ ಅವರ ಬೆಂಬಲಿಗರು ಬಸ್​ ನಿಲ್ದಾಣ ಬಳಿ ಟೈರ್​ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ಹೊರಹಾಕಿದರು. ಕಳೆದ ಮೂರು ಬಾರಿ ಶಾಸಕರು ಆಗಿ ಶಿವಳ್ಳಿ ಕ್ಷೇತ್ರದಲ್ಲಿ ಕೆಲಸ ಉತ್ತಮ ಮಾಡಿದ್ದಾರೆ. ಅವರಿಗೆ ಈ ಬಾರಿ ಸಚಿವ ಸ್ಥಾನ ನೀಡಬೇಕಿತ್ತು. ಕೊನೆಯ ಕ್ಷಣದಲ್ಲಿ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಪ್ರತಿಭಟನಕಾರರು ಕಾಂಗ್ರೆಸ್​ ವಿರುದ್ಧ ಆಕ್ರೋಶ ಕೂಗಿ ಪ್ರತಿಭಟನೆ ನಡೆಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv