ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ನಾಶವಾಗಿ ಹೋಗುತ್ತೆ:ಶಾಸಕ ಸುಧಾಕರ್ ಆಕ್ರೋಶ

ಬೆಂಗಳೂರು: ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಫಸ್ಟ್ ನ್ಯೂಸ್ ಜತೆ ಮಾತನಾಡಿರುವ ಶಾಸಕ ಡಾ. ಸುಧಾಕರ್ ಅವರು ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಇರೋದಿಲ್ಲ. ಪಕ್ಷ ಹಾಗೂ ಜನತೆಯ ದೃಷ್ಟಿಯಿಂದ ಈ ಸರ್ಕಾರ ಇರೋದು ಒಳ್ಳೆಯದಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ನಾಶವಾಗಿ ಹೋಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ.

ನನಗೆ ಮತ್ತೆ ಸಚಿವ ಸ್ಥಾನ ಕೊಟ್ಟರೂ ಬೇಡ. ಅಧಿಕಾರ ಅನುಭವಿಸುತ್ತಿರುವ ಪಕ್ಷದವರೇ ನನಗೆ ಅವಕಾಶ ತಪ್ಪಿಸಿದರು. ಜೆಡಿಎಸ್ ಒಕ್ಕಲಿಗರನ್ನ ಗುತ್ತಿಗೆ ತೆಗೆದುಕೊಂಡಿದೆಯಾ? ನಾನು ರಾಹುಲ್ ಗಾಂಧಿ ಅವ್ರನ್ನ ಮೆಚ್ಚಿ ರಾಜಕೀಯಕ್ಕೆ ಬಂದೆ. ಸಿದ್ದರಾಮಯ್ಯ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರು. ಆದರೆ, ಹೈಕಮಾಂಡ್ ಇಂದು ಅವರನ್ನ ನಡೆಸಿಕೊಳ್ತಿರೋ ರೀತಿ ಬೇಸರ ಮೂಡಿಸಿದೆ. ಕ್ಷೇತ್ರದ ಜನರ ಜೊತೆ ಚರ್ಚಿಸಿ, ಅಂತಿಮ ನಿರ್ಧಾರ ಕೈಗೊಳ್ತೇನೆ ಎಂದು ತಮ್ಮ ಆಕ್ರೋಶ ಹೊರಹಾಕಿದರು.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ : contact@firstnews.tv