ಸಂಪುಟ ರಚನೆ ನಂತರ ಕಾಂಗ್ರೆಸ್ ಬೆತ್ತಲು: ಕೆ.ಎಸ್‌.ಈಶ್ವರಪ್ಪ

ಶಿವಮೊಗ್ಗ: ಸಂಪುಟ ರಚನೆ ನಂತರ ಕಾಂಗ್ರೆಸ್ ಬೆತ್ತಲಾಗಿದೆ ಅಂತಾ ಪರಿಷತ್‌ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪುಟ ರಚನೆ ನಂತರ ಕಾಂಗ್ರೆಸ್ ಬೆತ್ತಲಾಗಿದೆ. ಪ್ರಾಮಾಣಿಕ ಕಾಂಗ್ರೆಸ್ಸಿಗರು ಈ ಹಿಂದೆ ಯಡಿಯೂರಪ್ಪ ಅವರೊಂದಿಗೆ ಸರ್ಕಾರ ರಚನೆ ಸಂಬಂಧ ಮಾತನಾಡಿದ್ದರು. ಈಗಲೂ ಕಾಲ ಮಿಂಚಿಲ್ಲ, ರಾಜ್ಯ ಹಾಗೂ ದೇಶದ ಹಿತದೃಷ್ಟಿಯಿಂದ ಬಿಜೆಪಿಯೊಂದಿಗೆ ಬನ್ನಿ ಅಂತಾ ಆಹ್ವಾನ ಕೊಟ್ಟರು. ಶಿಕ್ಷಕರ ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಗಳ ಗೆಲ್ಲುವುದು ನಿಶ್ಚಿತ ಅಂತಾ ವಿಶ್ವಾಸ ವ್ಯಕ್ತಪಡಿಸಿದ್ರು.
ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯನೂರು ಮಂಜುನಾಥ್ ಮಾತನಾಡಿ, ಒಟ್ಟು 30 ಕ್ಷೇತ್ರದಲ್ಲೂ ಪ್ರವಾಸ ಮಾಡಿದ್ದು ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ. ಪೇಜ್ ಪ್ರಮುಖರ ಬದಲು ಮತದಾರರನ್ನು ಸಂಪರ್ಕಿಸಿಕೊಂಡು ಬರಲಾಗಿದೆ. 5 ಜಿಲ್ಲೆಗಳಲ್ಲಿ 5 ಸಂಸದರು, 6 ವಿಧಾನ ಪರಿಷತ್ ಸದಸ್ಯರು ಹಾಗೂ 27 ಶಾಸಕರು ಬಿಜೆಪಿಯವರಿದ್ದಾರೆ. ಹಾಗಾಗಿ ಈ ಚುನಾವಣೆಯಲ್ಲಿ ಮೊದಲ ಸುತ್ತಿನಲ್ಲೇ ಮತದಾರರು ನಮ್ಮನ್ನು ಗೆಲ್ಲಿಸಿದ್ದಾರೆ ಅಂತಾ ವಿಶ್ವಾಸ ವ್ಯಕ್ತಪಡಿಸಿದ್ರು.