‘ಕೈ’ಗೆ ಆಘಾತ, ಕಾಂಗ್ರೆಸ್​ ವಕ್ತಾರೆ ಪ್ರಿಯಾಂಕ ಚತುರ್ವೇದಿ ಗುಡ್​ಬೈ..!

ನವದೆಹಲಿ: ಲೋಕಸಭೆ ಚುನಾವಣೆಯ ಬಿಸಿಯಲ್ಲೇ ಕಾಂಗ್ರೆಸ್​ಗೆ ಮತ್ತೊಂದು ಆಘಾತ ಆಗಿದೆ. ಎಐಸಿಸಿ ವಕ್ತಾರೆ ಪ್ರಿಯಾಂಕ ಚತುರ್ವೇದಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ರಾಜೀನಾಮೆ ಪತ್ರವನ್ನ ರವಾನಿಸಿದ್ದು, ಕಾಂಗ್ರೆಸ್​ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ತಾವು ನಿಭಾಯಿಸುತ್ತಿದ್ದ ಎಲ್ಲಾ ಸ್ಥಾನಗಳಿಗೂ ರಾಜೀನಾಮೆ ನೀಡುತ್ತಿರೋದಾಗಿ ತಿಳಿಸಿದ್ದಾರೆ.

ನಾನು ಕಾಂಗ್ರೆಸ್​ನ ಐಡಿಯಾಲಜಿಗಳ ಮೇಲೆ ನಂಬಿಕೆ ಇಟ್ಟು ಕಳೆದ 10 ವರ್ಷಗಳ ಹಿಂದೆ ಯೂಥ್​ ಕಾಂಗ್ರೆಸ್​ನ ಸದಸ್ಯೆಯಾಗಿ ಸೇರಿಕೊಂಡೆ. ಕಳೆದ 10 ವರ್ಷಗಳಿಂದ ಕಾಂಗ್ರೆಸ್​ನ ವಿವಿಧ ಹುದ್ದೆಗಳನ್ನ ಜವಾಬ್ದಾರಿಯಿಂದ ನಿರ್ವಹಿಸಿದ್ದೇನೆ. ನನಗೆ ಕೊಟ್ಟ ಎಲ್ಲಾ ಜವಾಬ್ದಾರಿಗಳನ್ನ ಸಂಪೂರ್ಣ ನಿಭಾಯಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಈ ಅವಧಿಯಲ್ಲಿ ನಾನು ಕೆಲವು ಸಮಸ್ಯೆಗಳನ್ನ ಎದುರಿಸಿದ್ದೇನೆ. ನನಗೆ, ನನ್ನ ಕುಟುಂಬ, ನನ್ನ ಮಕ್ಕಳಿಗೆ ಬೆದರಿಕೆಗಳು ಕೂಡ ಎದುರಾಗಿತ್ತು ಎಂದಿರುವ ಅವರು, ಇತ್ತೀಚೆಗೆ ಉತ್ತರ ಪ್ರದೇಶದ ಮಥುರಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ನಡೆಸುವ ವೇಳೆ ಕೆಲ ಕಾಂಗ್ರೆಸ್ ಕಾರ್ಯಕರ್ತರು​ ಪ್ರಿಯಾಂಕ ಚತುರ್ವೇದಿ ಜೊತೆ ಅನುಚಿತ ವರ್ತನೆ ಮಾಡಿದ್ದರು. ಈ ವಿಚಾರವನ್ನ ಪ್ರಸ್ತಾಪಿಸಿ ತಾವು ರಾಜೀನಾಮೆ ನೀಡುತ್ತಿರೋದಾಗಿ ತಿಳಿಸಿದ್ದಾರೆ.

ಅನುಚಿತ ವರ್ತನೆ ಸಂಬಂಧ ಕಾಂಗ್ರೆಸ್​ ಕಾರ್ಯಕರ್ತನ್ನ ಅಮಾನತು ಮಾಡಲಾಗಿತ್ತು. ಆದರೆ ಲೋಕಸಭೆ ಚುನಾಣೆ ಹಿನ್ನೆಲೆಯಲ್ಲಿ ಅಮಾನತನ್ನ ತೆರವುಗೊಳಿಸಲಾಗಿತ್ತು. ಇದಕ್ಕೆ ತೀವ್ರ ಮುನಿಸಿಕೊಂಡಿರುವ ಅವರು, ಮಹಿಳೆಯರ ಡಿಗ್ನಿಟಿ, ಸಬಲೀಕರಣದ ಬಗ್ಗೆ ಪಕ್ಷ ಮಾತನಾಡುತ್ತೆ. ಆದರೆ ನನಗಾದ ವಿಚಾರದಲ್ಲಿ ಇದು ಯಾವುದೇ ಪರಿಣಾಮ ಬೀರಿಲ್ಲ ಎಂದು ಅಸಮಾಧಾನಗೊಂಡಿದ್ದಾರೆ.

ಕಳೆದ ಎರಡು ದಿನಗಳ ಹಿಂದಷ್ಟೇ ಪಕ್ಷದ ವಿರುದ್ಧ ಟೀಕೆ ಮಾಡಿದ್ದ ಪ್ರಿಯಾಂಕ ಕಾಂಗ್ರೆಸ್‌ನಲ್ಲಿ ಬೆವರು ಮತ್ತು ರಕ್ತ ಹರಿಸಿ ಕಷ್ಟಪಟ್ಟು ದುಡಿಯುವವರ ಬದಲು ಕೊಳಕು ಗೂಂಡಾಗಳಿಗೆ ಆದ್ಯತೆ ನೀಡುತ್ತಿರೋದು ಬೇಸರ ತಂದಿದೆ. ಎಷ್ಟೇ ಅಡೆತಡೆಗಳನ್ನು ಎದುರಿಸಿದ್ದರೂ ಪಕ್ಷದೊಳಗೆ ನನಗೆ ಬೆದರಿಕೆ ಹಾಕುವವರಿಗೆ ಛೀಮಾರಿ ಕೂಡ ಹಾಕದೆ ಹಾಗೇ ಬಿಡುತ್ತಾರೆ ಅಂತಾ ಕಿಡಿಕಾರಿದ್ದರು. ಸದ್ಯ ಕಾಂಗ್ರೆಸ್ ತೊರೆದಿರುವ ಅವರು ಇಂದು ಶಿವಸೇನೆ ಸೇರಿದರು.

ಶಿವಸೇನೆ ಸೇರಿದ ಪ್ರಿಯಾಂಕ ಚತುರ್ವೇದಿ


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv