‘ಕಾಂಗ್ರೆಸ್ ತಾನೇ ದೊಡ್ಡಣ್ಣ ಎಂಬ ಅಹಂ ಬಿಡಬೇಕು’

ಕಾರವಾರ: ಕಾಂಗ್ರೆಸ್ ಪಕ್ಷವು ತಾನೇ ದೊಡ್ಡಣ್ಣ ಎನ್ನುವ ಅಹಂನಿಂದ ಕೆಳಗಿಳಿಯಬೇಕು, ಹಾಗಾದಾಗ ಮಾತ್ರ ನಮ್ಮಂತಹವರು ಕೈ ಜೊಡಿಸಿ ಸರಕಾರ ರಚಿಸಲು ಸಾಧ್ಯವಿದೆ ಎಂದು ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವ ಎನ್. ಮಹೇಶ ಕಾರವಾರದಲ್ಲಿ ಹೇಳಿದ್ದಾರೆ.

ಛತ್ತೀಸ್​ಗಡದಲ್ಲಿ ಕಾಂಗ್ರೆಸ್ ನಿಂದ ಬಿಎಸ್‌ಪಿ ಬೆಂಬಲ ವಾಪಸ್ ಪಡೆದುಕೊಂಡಿದೆ. ಮಧ್ಯಪ್ರದೇಶ, ರಾಜಸ್ಥಾನ ಕಾಂಗ್ರೆಸ್ಸಿಗರು ಅಹಂಕಾರಿಗಳಾಗಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ನ ಪರಿಸ್ಥಿತಿ ಎಲ್ಲಿಗೆ ಬಂದಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ನಮ್ಮೊಂದಿಗೆ ಚೆನ್ನಾಗಿದ್ದು, ಉತ್ತಮ ಆಡಳಿತ ನಡೆಸುತ್ತಿದೆ. ನಮ್ಮಲ್ಲಿ ಯಾವುದೇ ಗೊಂದಲಗಳು ಇಲ್ಲ ಎಂದು ಹೇಳಿದ್ದಾರೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv