ಮೋದಿ ಹೆಲಿಕಾಪ್ಟರ್​​ನಿಂದ ಸೀಕ್ರೆಟ್​​ ಬಾಕ್ಸ್​ ಸಾಗಣೆ: ಕಪ್ಪುಪೆಟ್ಟಿಗೆ ಬಗ್ಗೆ ಕಾಂಗ್ರೆಸ್​​ ಅನುಮಾನ

ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಸೀಕ್ರೆಟ್​ ಬಾಕ್ಸ್​ ಅಸ್ತ್ರ ಪ್ರಯೋಗ ಮಾಡಿದೆ. ಏಪ್ರಿಲ್ 9ರಂದು  ಚಿತ್ರದುರ್ಗದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಸಮಾವೇಶಕ್ಕೆ ಮೋದಿ ಆಗಮಿಸಿದ್ದರು. ಈ ವೇಳೆ ಪ್ರಧಾನಿ ಬಂದಿಳಿದಿದ್ದ ಹೆಲಿಕಾಪ್ಟರ್​ನಿಂದ ಬಾಕ್ಸ್​ವೊಂದನ್ನ ಇಳಿಸಿಕೊಂಡು ತರಾತುರಿಯಲ್ಲಿ ಇನ್ನೋವಾ ಕಾರಿನಲ್ಲಿ ಹಾಕಿಕೊಂಡು ಸಾಗಿಸಲಾಗಿದೆ ಅನ್ನೋ ವಿಡಿಯೋವನ್ನ ಕಾಂಗ್ರೆಸ್​ ರಿಲೀಸ್​ ಮಾಡಿದೆ.

ರಾಷ್ಟ್ರೀಯ ಕಾಂಗ್ರೆಸ್​ ಪ್ರಚಾರ ಸಮಿತಿಯ ಇನ್​ಚಾರ್ಜ್​ ಶ್ರೀವತ್ಸ ಆ ವಿಡಿಯೋವನ್ನ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ. ಟ್ವೀಟ್​ನಲ್ಲಿ, ಚಿತ್ರದುರ್ಗದಲ್ಲಿ ಪ್ರಧಾನಿಯ ಹೆಲಿಕಾಪ್ಟರ್​​ನಿಂದ ಅನುಮಾನಾಸ್ಪದ ಬಾಕ್ಸ್​ವೊಂದನ್ನ ಇಳಿಸಲಾಯ್ತು. ಎಸ್‌ಪಿಜಿ ಬಿಗಿಭದ್ರತೆಯಲ್ಲಿ ತರಾತುರಿಯಲ್ಲಿ ಈ ಬಾಕ್ಸ್​​ ಅನ್ನ ಖಾಸಗಿ ಇನ್ನೋವಾ ಕಾರಿಗೆ ಸಾಗಿಸಿದ್ದು ಯಾಕೆ ? ಭಾರವಾದ ಪೆಟ್ಟಿಗೆಯಲ್ಲಿ ಇದ್ದಿದಾದ್ರೂ ಏನು? ಪೆಟ್ಟಿಗೆಯನ್ನ ಸಾಗಿಸುವವರು ಯಾರು? ಚುನಾವಣಾ ಆಯೋಗ ಇದರ ಬಗ್ಗೆ ಗಮನಹರಿಸಿದೆಯಾ..? ಅಥವಾ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಇದು ಬಂದಿದೆಯಾ? ಎಂದು ಪ್ರಶ್ನಿಸಿದ್ದಾರೆ.

 

 


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv