ನನ್ನ ಮಗನಿಗೆ ಟಿಕೆಟ್ ನೀಡುವುದು ನಂಗೆ ಗೊತ್ತಿಲ್ಲ: ಶಾಮನೂರು ಶಿವಶಂಕರಪ್ಪ

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಹಂಚಿಕೆ ಗೊಂದಲ ಮುಗಿಯುವಂತೆ ಕಾಣುತ್ತಿಲ್ಲ. ಈ ಕುರಿತು ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ನಮ್ಮ ಹೈ ಕಮಾಂಡ್ ಮತ್ತು ಕೆಪಿಸಿಸಿ ಸೇರಿದಂತೆ ನನ್ನನ್ನು ಯಾರು ಮಾತಾಡಿಸಿಲ್ಲ. ನನ್ನ ಮಗ ಮಲ್ಲಿಕಾರ್ಜುನ್​​ಗೆ ಟಿಕೆಟ್ ನೀಡುವುದು ನಂಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಹಂಚಿಕೆ ಬಗ್ಗೆ ಶಾಮನೂರು ಶಿವಶಂಕರಪ್ಪ ತಲೆಕೆಡಿಸಿಕೊಂಡಿಲ್ಲ. ಸಚಿವ ಸ್ಥಾನ ನೀಡದ್ದಕ್ಕೆ ಬೇಸರವಾಗಿದ್ದಾರೆ. ಇನ್ನು ಟಿಕೇಟ್ ಅಸ್ಪಷ್ಟವಾಗದ ಕಾರಣ ನಿನ್ನೆ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಬೆಂಗಳೂರಿಗೆ ತೆರಳಿ ಕಾಂಗ್ರೆಸ್​​​ ನಾಯಕರನ್ನ ಭೇಟಿಯಾಗಿದ್ದರು.

ಎಸ್.ಎಸ್. ಮಲ್ಲಿಕಾರ್ಜುನ್ ಹೇಳೋದೇನು?
ಇದೇ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಎಸ್.ಎಸ್. ಮಲ್ಲಿಕಾರ್ಜುನ್​​,  ಸೋಮವಾರದವರೆಗು ಕಾಯ್ದು ನೋಡಿ. ಕಾಂಗ್ರೆಸ್ ವರಿಷ್ಠರೊಡನೆ ಇನ್ನೊಮ್ಮೆ ಮಾತುಕತೆ ನಡೆದ ನಂತರ ನಿರ್ಧಾರ ಅಂತಿಮವಾಗಲಿದೆ. ನನ್ನ ಸ್ಪರ್ಧೆ ಬಗ್ಗೆ ಇನ್ನೂ ಹೈಕಮಾಂಡ್ ಮುಖಂಡರ ಜೊತೆ ಚರ್ಚಿಸಬೇಕಿದೆ‌. ದಾವಣಗೆರೆಗೆ ಹೈ ಕಮಾಂಡ್ ಮುಖಂಡರು ಬಂದು ಇನ್ನೊಂದು ಸುತ್ತು ಮಾತುಕತೆಯಾಡುತ್ತಾರೆ. ನಿನ್ನೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಯಾವುದು ತೀರ್ಮಾನವಾಗಿಲ್ಲ ಎಂದು ಹೇಳಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv