ಚುನಾವಣೆಗೆ ‘ನೋ’ ಎಂದ ಶಾಮನೂರು, ಅಭ್ಯರ್ಥಿ ಹುಡುಕಾಟ ಸಂಕಷ್ಟದಲ್ಲಿ ಕೈ ನಾಯಕರು

ಬೆಂಗಳೂರು: ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಕಣಕ್ಕಿಳಿಯಲು ಶಾಮನೂರು ಶಿವಶಂಕರಪ್ಪ ಹಿಂದೇಟು ಹಾಕಿದ್ದಾರೆ. ಹಾಗಾಗಿ ಕೈ ಪಾಳೆಯದಲ್ಲಿ ಶಾಮನೂರು ಶಿವಶಂಕ್ರಪ್ಪರಿಗೆ ಪರ್ಯಾಯವಾಗಿ ಅಭ್ಯರ್ಥಿ ಹುಡುಕಾಟ ನಡೆಯುತ್ತಿದೆ. ಈ ಹಿನ್ನೆಲೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ದಾವಣಗೆರೆಯ ಇಬ್ಬರು ಕಾಂಗ್ರೆಸ್​ ಮುಖಂಡರಿಗೆ ಬುಲಾವ್ ನೀಡಿದ್ರು. ದಿನೇಶ್​ ಆಹ್ವಾನ ಸ್ವೀಕರಿಸಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ ಮಂಜಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಜೆ.ಹೆಚ್ ಪಟೇಲ್ ತಮ್ಮನ ಪುತ್ರ ತೇಜಸ್ವಿ ಪಟೇಲ್ ಆಗಮಿಸಿದ್ರು. ಇವರಿಬ್ಬರ ಜೊತೆ ಚರ್ಚೆ ನಡೆಸಿರುವ ದಿನೇಶ್ ಗುಂಡೂರಾವ್ ಮುಂದಿನ ನಡೆ ಬಗ್ಗೆ ತಿಳಿಸುವುದಾಗಿ ಹೇಳಿದ್ದಾರೆ.

ತೇಜಸ್ವಿ ಪಟೇಲ್
ಹೆಚ್.ಬಿ ಮಂಜಪ್ಪ

ಕಾಂಗ್ರೆಸ್​ ಈಗಾಗಲೇ ಚುನಾವಣೆಯಲ್ಲಿ ಇಬ್ಬರು ಕುರುಬ ಸಮುದಾಯದವರಿಗೆ ಟಿಕೆಟ್ ನೀಡಿದೆ. ಹಾಗಾಗಿ ಅದೇ ಸಮುದಾಯದ ಮಂಜಪ್ಪಗೆ ಟಿಕೆಟ್ ಸಿಗಲಿದೆಯಾ ಎಂಬ ಅನುಮಾನ ವ್ಯಕ್ತವಾಗಿದೆ. ಈ ನಡುವೆ ನಮ್ಮ ಬದಲಿಗೆ ಹೆಚ್.ಬಿ ಮಂಜಪ್ಪಗೆ ಟಿಕೆಟ್ ನೀಡುವಂತೆ ಶಾಮನೂರು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಜೊತೆಗೆ ಲಿಂಗಾಯತ ಸಮುದಾಯದ ತೇಜಸ್ವಿಗೆ ಟಿಕೆಟ್ ನೀಡಬಹುದಾ ಎಂಬುದರ ಬಗ್ಗೆಯೂ ಚರ್ಚೆ ನಡೆದಿದೆ. ಒಟ್ಟಿನಲ್ಲಿ ಬದಲಾದ ರಾಜಕೀಯ ವಾತಾವರಣದಲ್ಲಿ ಕಾಂಗ್ರೆಸ್​ ಯಾರಿಗೆ ಟಿಕೆಟ್​ ನೀಡಲಿದೆ ಎಂಬುದು ನಾಳೆ ತಿಳಿಯಲಿದೆ.

ಶಾಮನೂರು ಶಿವಶಂಕರಪ್ಪರ ಮುನಿಸಿಗೆ ಕಾರಣ..?
ಕಾಂಗ್ರೆಸ್​​ ಸರ್ಕಾರದ ಅವಧಿಯಲ್ಲಿ  ವಯಸ್ಸಿನ ಕಾರಣ ನೀಡಿ ಅಂದಿನ ಸಿಎಂ ಆಗಿದ್ದ ಸಿದ್ದರಾಮಯ್ಯ, ಶಾಮನೂರು ಶಿವಶಂಕ್ರಪ್ಪರನ್ನು ಸಂಪುಟಕ್ಕೆ ಸೇರಿಸಿಕೊಂಡಿರಲಿಲ್ಲ. ಆದ್ರೆ ಇದೀಗ ಲೋಕಸಭಾ ಚುನಾವಣೆಗೆ ದಾವಣಗೆರೆ ಕ್ಷೇತ್ರದಲ್ಲಿ ಪ್ರಬಲರಾಗಿರುವ ಶಾಮನೂರು ಶಿವಶಂಕ್ರಪ್ಪನವರಿಗೆ ಟಿಕೆಟ್ ನೀಡಿದ್ರು. ಈ ಹಿನ್ನೆಲೆ ಪಕ್ಷದ ನಾಯಕರ ವಿರುದ್ಧ ಮುನಿಸಿಕೊಂಡಿರುವ ಶಾಮನೂರು ಶಿವಶಂಕ್ರಪ್ಪ, ಚುನಾವಣೆಗೆ ನಿಲ್ಲಲು ವಯಸ್ಸಿನ ಅಡ್ಡಿ ಬರುವುದಿಲ್ಲವೇ..? ಅಂತಾ ರಾಜ್ಯ ಕಾಂಗ್ರೆಸ್​ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಹೈಕಮಾಂಡ್ ನೀಡಿದ ಟಿಕೆಟ್​ನ ನಯವಾಗಿಯೇ ತಿರಸ್ಕರಿಸಿದ್ದರು. ಅಲ್ಲದೇ, ತಮ್ಮ ಪುತ್ರ ಮಲ್ಲಿಕಾರ್ಜುನ್​ಗೂ ಕೂಡಾ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಇಲ್ಲ ಎಂದು ಹೇಳಿದ್ರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv