ಕಾಂಗ್ರೆಸ್ ನಾಯಕ ಡಾ.‌ಮಹೇಶ ನಾಲವಾಡ ಬಿಜೆಪಿಗೆ ಸೇರ್ಪಡೆ

ಹುಬ್ಬಳ್ಳಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಸಮ್ಮುಖದಲ್ಲಿ ಕಾಂಗ್ರೆಸ್ ನಾಯಕ ಡಾ.‌ಮಹೇಶ ನಾಲವಾಡ ಬಿಜೆಪಿಗೆ ಸೇರ್ಪಡೆಗೊಂಡರು. ಈ ವೇಳೆ ಡಾ. ಮಹೇಶ ನಾಲವಾಡ್ ಅವರನ್ನು ಯಡಿಯೂರಪ್ಪ ಪಕ್ಷದ ಶಾಲು ಹೊದಿಸಿ, ಪಕ್ಷಕ್ಕೆ ಬರ ಮಾಡಿಕೊಂಡರು. ಈ ವೇಳೆ ಮಹೇಶ್ ನಾಲವಾಡ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾದರು. ಬಳಿಕ ಡಾ ಮಹೇಶ ನಾಲವಾಡ ಬಿ.ಎಸ್‌ ಯಡಿಯೂರಪ್ಪಗೆ ಶಾಲು ಹೊದಿಸಿ ಗೌರವಿಸಿದರು. ಈ ಹಿಂದೆ ಡಾ.‌ಮಹೇಶ ಎರಡು ಬಾರಿ ಕಾಂಗ್ರೆಸ್ ಪಕ್ಷದಿಂದ ಹು-ಧಾ ಸೆಂಟ್ರಲ್ ಕ್ಣೇತ್ರದಿಂದ ಸ್ಪರ್ಧಿಸಿ , ಜಗದೀಶ್ ಶೆಟ್ಟರ್ ವಿರುದ್ದ ಸೋಲು ಅನುಭವಿಸಿದ್ದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv