‘ಬಿಜೆಪಿಯವರು ಬೇರೆಯವರ ತಾಳಿಯನ್ನ ಕಿತ್ತುಕೊಂಡು ತಾವು ಕಟ್ಟಿಕೊಂಡಿದ್ದಾರೆ’

ಹುಬ್ಬಳ್ಳಿ: ಬಿಜೆಪಿಯವರ ಕತೆ ಹೇಗಾಗಿದೆ ಅಂದ್ರೆ, ಬೆರೆಯವರ ತಾಳಿಯನ್ನ ಕಿತ್ತುಕೊಂಡು ತಾವು ಕಟ್ಟಿಕೊಂಡಿದ್ದಾರೆ. ಪಕ್ಕದ ಮನೆಯ ಸೊಸೆಯನ್ನ ತಮ್ಮ ಮನೆಗೆ ಸೇರಿಸಿಕೊಂಡಿದ್ದಾರೆ. ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಲ್ಲದೆ ಕಾಂಗ್ರೆಸ್ ಮಕ್ಕಳನ್ನ ಕರೆದ್ಯೋಯ್ದು ತಾವು ಸಾಕುತ್ತಿದ್ದಾರೆ ಅಂತಾ ಕಾಂಗ್ರೆಸ್ ಮುಖಂಡ ಸಿಎಮ್ ಇಬ್ರಾಹಿಂ ಲೇವಡಿ ಮಾಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ದೇಶ ಅಪಾಯದಲ್ಲಿದೆ, ಸಂವಿಧಾನ ಉಳಿಸಬೇಕಿದೆ. ಮೋದಿ ವರ್ತನೆ ಅಹಂ ಬ್ರಹ್ಮಾಸ್ಮಿ ಎಂಬಂತಿದೆ‌. ದೇಶಕ್ಕೆ ವಾಜಪೇಯಿ ಕೊಡುಗೆಯನ್ನು ಮೋದಿ ಸ್ಮರಿಸುತ್ತಿಲ್ಲ. ವಾಜಪೇಯಿ ದೇಶಕ್ಕೆ ಹೆದ್ದಾರಿಗಳ ಕೊಟ್ಟು ಮಹಾನುಭಾವ. ವಾಜಪೇಯಿ ಅವರನ್ನು ಪಕ್ಷಾತೀತವಾಗಿ ಸ್ಮರಿಸುತ್ತೇವೆ. ಆದ್ರೆ ಮೋದಿ ಈ ದೇಶಕ್ಕೆ ಏನ್ ಮಾಡಿದ್ದಾರೆ? ಚೌಕಿದಾರ್​ಗೆ ತನ್ನ ಕಚೇರಿಯಲ್ಲಿರುವ ಕಡತಗಳನ್ನ ಕಾಪಾಡಲು ಸಾಧ್ಯವಾಗಿಲ್ಲ. ಇನ್ನೂ ದೇಶವನ್ನ ಹೇಗೆ ಕಾಪಾಡುತ್ತಾರೆ? ಯಡಿಯೂರಪ್ಪ ಹವಾ ಬಿಜೆಪಿಯಲ್ಲಿ ಕಡಿಮೆಯಾಗಿದೆ. ಯಡಿಯೂರಪ್ಪ ಮಾತು ರಾಜ್ಯದಲ್ಲಿ, ಪಕ್ಷದಲ್ಲಿ ನಡೆಯುತ್ತಿಲ್ಲ. ಬಿ.ಎಲ್ ಸಂತೋಷ್​ ಮುಂದೆ, ಯಡಿಯೂರಪ್ಪ ಹಿಂದೆ ಎಂಬಂತಾಗಿದೆ ಅಂತಾ ಕಿಡಿ ಕಾರಿದ್ರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv