ಮೋದಿಯನ್ನ ಹೊಗಳಿದ ಕೇರಳ ಕಾಂಗ್ರೆಸ್​ ಮುಖಂಡನಿಗೆ ನೋಟಿಸ್

ತಿರುವನಂತಪುರಂ: ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದ್ದಕ್ಕೆ  ಕೇರಳದ ಕಾಂಗ್ರೆಸ್​ ಮುಖಂಡರೊಬ್ಬರ ವಿರುದ್ಧ ನೋಟಿಸ್ ಜಾರಿಮಾಡಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಮೋದಿ ಗೆಲುವಿನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರೋ ಕಣ್ಣೂರು ಕ್ಷೇತ್ರ ಮಾಜಿ ಶಾಸಕ ಎಬಿ ಅಬ್ದುಲ್ಲಾ ಕುಟ್ಟಿ, ಮೋದಿ ಗಾಂಧಿ ತತ್ವಗಳನ್ನ ಅಳವಡಿಸಿಕೊಂಡು ಉತ್ತಮ ಆಡಳಿತ ನೀಡಿದ್ದಾರೆ. ದೇಶದ ಇತರೆ ಭಾಗಗಳಲ್ಲಿ ವಿರೋಧ ಪಕ್ಷದ ನಾಯಕರು ಬಿಜೆಪಿ ಸೇರ್ತಿದ್ದಾರೆ ಎಂದು ಹೇಳಿದ್ದರು.

ಇಂದು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರೋ ಅವರು, ನಾವು ಯೋಜನೆಗಳನ್ನ ರೂಪಿಸುವಾಗ, ಬಡವರನ್ನ ಮರೆಯಬಾರದು, ನನಗನ್ನಿಸುವ ಪ್ರಕಾರ ಮೋದಿ ಇದನ್ನು ಮಾಡಿದ್ದಾರೆ. ಕಳೆದ 5 ವರ್ಷಗಳಲ್ಲಿ 9.15 ಲಕ್ಷ ಟಾಯ್ಲೆಟ್​​ಗಳು ನಿರ್ಮಾಣವಾಗಿವೆ. 5-6 ಕೋಟಿ ಜನರಿಗೆ ಎಲ್​​ಪಿಜಿ ಗ್ಯಾಸ್ ಸಂಪರ್ಕ ಸಿಕ್ಕಿದೆ. ಇದೇ ಅವರನ್ನು ಹೀರೋ ಮಾಡಿದ್ದು ಎಂದು ಹೇಳಿದ್ದಾರೆ. ​​

ಅಲ್ಲದೆ ಫೇಸ್​​ಬುಕ್​ ಪೋಸ್ಟ್​ ಹಾಕಿ, ರಾಜಕೀಯ ವಿಶ್ಲೇಷಕರು ಹಾಗೂ ಮೋದಿ ವಿರೋಧಿಗಳು ಬಿಜೆಪಿ ಗೆಲುವಿನ ಕಾರಣಗಳ ಬಗ್ಗೆ ಮಾತನಾಡುವಾಗ ನಿಷ್ಪಕ್ಷಪಾತವಾಗಿರುವಂತೆ ಹೇಳಿದ್ದಾರೆ. ಮೋದಿ ಸರ್ಕಾರದ ಹಲವು ಯೋಜನೆಗಳನ್ನ ಅವರು ಹೊಗಳಿದ್ದಾರೆ. ಈ ಹಿನ್ನೆಲೆ ಕೇರಳ ಪ್ರದೇಶ್​​ ಕಾಂಗ್ರೆಸ್​ ಕಮಿಟಿ ಅಬ್ದುಲ್ಲಾ ಕುಟ್ಟಿ ಅವರಿಗೆ ಈ ಬಗ್ಗೆ ವಿವರಣೆ ನೀಡುವಂತೆ ಹೇಳಿದೆ. ಫೇಸ್​​ಬುಕ್​ನಲ್ಲಿ ಎಲ್ಲರೂ ನೋಡುವಂತೆ ತಮ್ಮ ಹೇಳಿಕೆಯ ಪೋಸ್ಟ್​ ಹಾಕಿರೋದ್ರಿಂದ ಕ್ರಮ ಜರುಗಿಸೋದು ಅಗತ್ಯ ಅಂತ ಕೇರಳ ಕಾಂಗ್ರೆಸ್​ ಅಧ್ಯಕ್ಷ ಮುಲ್ಲಪಲ್ಲಿ ರಾಮಚಂದ್ರನ್​ ಹೇಳಿದ್ದಾರೆ.


 

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv