ಫೇಸ್​​ಬುಕ್​​​ ಜಾಹೀರಾತು ಖರ್ಚಿನಲ್ಲಿ ಕಾಂಗ್ರೆಸ್ಸೇ ನಂಬರ್​ ಒನ್..!

ನವದೆಹಲಿ: ದೇಶದಲ್ಲಿ ಲೋಕಸಭೆ ಚುನಾವಣೆಯ ಕಾವು ಜೋರಾಗಿದೆ. ರಾಜಕೀಯ ಪಕ್ಷಗಳು ತಮ್ಮ ಗೆಲುವಿಗಾಗಿ ಇನ್ನಿಲ್ಲದ ಕಸರತ್ತುಗಳನ್ನ ಮಾಡುತ್ತಿವೆ. ಅದ್ರಂತೆ ಜನರ ಮನವೊಲಿಕೆಗೆ ಜಾಹೀರಾತುಗಳ ಮೊರೆ ಹೋಗೋದು ಹೊಸದೇನೂ ಅಲ್ಲ. ಟಿವಿ, ರೇಡಿಯೋ, ಸಾಮಾಜಿಕ ಜಾಲತಾಣಗಳನ್ನ ಬಲವಾಗಿ ನಂಬಿರುವ ರಾಜಕೀಯ ಪಕ್ಷಗಳು ಜಾಹೀರಾತಿಗಾಗಿ ವಿಪರೀತ ದುಡ್ಡು ಸುರಿಯುತ್ತಿವೆ.

ಅದ್ರಂತೆ ಕಾಂಗ್ರೆಸ್​ ಫೇಸ್​ಬುಕ್ ಜಾಹೀರಾತಿಗಾಗಿ ಮಾಡಿರುವ ಖರ್ಚಿನಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ವರದಿಗಳು ಹೇಳಿವೆ. ಕಳೆದ ಫೆಬ್ರವರಿಯಲ್ಲಿ ಫೇಸ್​ಬುಕ್​ ಮೊದಲ ಬಾರಿಗೆ ads library ಪರಿಚಯ ಮಾಡಿಕೊಟ್ಟಿತು. ಮಾರ್ಚ್​​ 31 ರಿಂದ ಏಪ್ರಿಲ್​ 6 ವರೆಗೆ ನಡೆಸಿರುವ ಸಮೀಕ್ಷೆ ಪ್ರಕಾರ ಕಾಂಗ್ರೆಸ್​ ಫೇಸ್​ಬುಕ್​ ಜಾಹೀರಾತಿಗಾಗಿ ಸಿಕ್ಕಪಟ್ಟೆ ಖರ್ಚು ಮಾಡಿದ್ದು, ಮೊದಲ ಸ್ಥಾನದಲ್ಲಿದೆ.

ವಾರಕ್ಕೆ ಕಾಂಗ್ರೆಸ್​ ಬರೋಬ್ಬರಿ 19.83 ಲಕ್ಷ ರೂಪಾಯಿ ಖರ್ಚು ಮಾಡಿ 194 ಜಾಹೀರಾತುಗಳನ್ನ ನೀಡಿದೆ. ಕಳೆದ ಫೆಬ್ರವರಿಯಿಂದ ಏಪ್ರಿಲ್ 6ರವರೆಗೆ ಒಟ್ಟು 13000 ಜಾಹೀರಾತಿಗೆ ಬರೋಬ್ಬರಿ ₹ 4.49 ಕೋಟಿ ಖರ್ಚು ಮಾಡಿದೆ.  194 ಜಾಹೀರಾತುಗಳು ಮಾರ್ಚ್​​ 31 ರಿಂದ ಏಪ್ರಿಲ್ 6 ಮಧ್ಯದಲ್ಲಿ ಪ್ರಕಟಗೊಂಡಿವೆ. ಇನ್ನು ಕಾಂಗ್ರೆಸ್​ ನೀಡಿರುವ ಎಲ್ಲಾ ಜಾಹೀರಾತುಗಳು ಇಂಗ್ಲಿಷ್, ಹಿಂದಿ ಹಾಗೂ ಸ್ಥಳೀಯ ಭಾಷೆಗಳಲ್ಲಿಯೂ ಇವೆ.

ಫೆಬ್ರವರಿ ಒಂದರಲ್ಲಿಯೇ ಕಾಂಗ್ರೆಸ್​ 604 ಜಾಹೀರಾತು ನೀಡಿ, ₹ 25.75 ಲಕ್ಷ ಹಣ ಖರ್ಚು ಮಾಡಿದೆ. ಬಿಜೆಪಿ ಕೆಲ ಅವಧಿಯಲ್ಲಿ 10101 ಜಾಹೀರಾತುಗಳನ್ನ ನೀಡಿ ₹ 34.64 ಲಕ್ಷ ಹಣವನ್ನ ಸುರಿದಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv