ಆಪರೇಷನ್ ಕಮಲ ಹತ್ತಿಕ್ಕಲು ಮುಂದಾದ ಕೈ​ ಹೈಕಮಾಂಡ್: ಬೆಂಗಳೂರಿನತ್ತ ಗುಲಾಂ ನಬಿ ಅಜಾದ್

ಬೆಂಗಳೂರು: ಲೋಕಸಭಾ ಚುನಾವಣೆ ಬೆನ್ನಲ್ಲೇ ರಾಜ್ಯ ಸರ್ಕಾರಕ್ಕೆ ಆಪರೇಷನ್ ಕಮಲದ ಸಂಕಷ್ಟ ಎದುರಾಗಿದ್ದು, ಈ ಹಿನ್ನೆಲೆ ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶಿಸಿದೆ. ಆಪರೇಷನ್ ಹತ್ತಿಕ್ಕಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಅಜಾದ್​​ ಅವರಿಗೆ ಬೆಂಗಳೂರಿಗೆ ತೆರಳುವಂತೆ ಸೂಚಿಸಲಾಗಿದೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೂಚನೆ ಮೇರೆಗೆ ಇಂದು ಸಂಜೆ ಗುಲಾಂ ನಬಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಅವರ ಜೊತೆಗೆ ಇಂದು ರಾಜ್ಯ ಉಸ್ತುವಾರಿ ವೇಣುಗೋಪಾಲ್ ಕೂಡ ಬೆಂಗಳೂರಿಗೆ ಬರ್ತಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ಇಂದು ಸಂಜೆ ಗುಲಾಂ ನಬಿ ಸಭೆ ನಡೆಸಲಿದ್ದಾರೆ. ಇನ್ನು ಇತ್ತೀಚೆಗೆ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದ   ರೋಷನ್ ಬೇಗ್​ ಪಾಲಿಗೆ ಗುಲಾಂ ನಬಿ ಅವರು ಗಾಡ್ ಫಾದರ್. ಹೀಗಾಗಿ ರೋಷನ್​​ ಬೇಗ್​ ಅವರನ್ನ ಮನವೊಲಿಸೋ ಪ್ರಯತ್ನ ಮಾಡಲಿದ್ದಾರೆ. ಜೊತೆಗೆ ಅತೃಪ್ತರ ಓಲೈಕೆ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ .

ರಾಜ್ಯದಲ್ಲಿ ಸರ್ಕಾರ ಉಳಿಸಿಕೊಳ್ಳಬೇಕಾದ ಹೊಣೆಗಾರಿಕೆ ಕೈ ನಾಯಕರದ್ದಾಗಿದ್ದು, ತೀರ ಸಂದಿಗ್ಧ ಪರಿಸ್ಥಿತಿ ಎದುರಾದಾಗ ಗುಲಾಂ ನಬಿ ಎಂಟ್ರಿಯಾಗ್ತಾರೆ ಎನ್ನಲಾಗಿದೆ.

ಇದನ್ನೂ ಓದಿ: ಮೈತ್ರಿ ಭದ್ರಗೊಳಿಸಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್​..! 

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv