‘ಪ್ರತ್ಯೇಕ ಧರ್ಮಕ್ಕಾಗಿ ಹಿಂದಿನ ಸರ್ಕಾರ ಹಠದಿಂದ ಪ್ರಸ್ತಾವನೆ ಕಳುಹಿಸಿತ್ತು’

ದಾವಣಗೆರೆ: ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ. ಹಿಂದಿನ ರಾಜ್ಯ ಸರ್ಕಾರ ಹಠದಿಂದ ಲಿಂಗಾಯತ ಪ್ರತ್ಯೇಕ ಧರ್ಮದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿತ್ತು ಅಂತಾ ರಂಭಾಪುರಿ ಮಠದ ಜಗದ್ಗುರುಗಳು ಹೇಳಿದರು.

ನಗರದ ರೇಣುಕಾ ಮಂದಿರದಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ಏರ್ಪಡಿಸಿದ್ದ ‘ಅಭಿನಂದನಾ ಸಮಾರಂಭ’ದಲ್ಲಿ ಮಾತನಾಡಿದ ಅವರು, ಹಿಂದಿನ ಸಿದ್ದರಾಮಯ್ಯ ಸರ್ಕಾರ, ಸಮಾಜದ ಮಾತಿಗೆ ಬೆಲೆ ಕೊಡದೇ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಕೇಂದ್ರ ಸರ್ಕಾರ, ಇದನ್ನ ತಿರಸ್ಕರಿಸಿದೆ. ಲಿಂಗಾಯತ ಹಾಗೂ ವೀರಶೈವ ಅನ್ನ ಒಂದುಗೂಡಿಸಲು ಶಾಮನೂರು ಶಿವಶಂಕರಪ್ಪ ಹೋರಾಟ ನಡೆಸಿದ್ದರು. ಈ ಹೋರಾಟದಲ್ಲಿ ಅವರ ಪಾತ್ರ ಪ್ರಮುಖ ಪಾತ್ರ ಇದೆ. ಇಂದು ಅವರಿಗೆ ಅಭಿನಂದನೆ ಸಲ್ಲಿಸಲು ನನಗೆ ಸಂತೋಷ ಆಗುತ್ತಿದೆ ಎಂದರು.
ಶಾಮನೂರು ಶಿವಶಂಕರಪ್ಪರಿಗೆ ವೀರಶೈವ ಧರ್ಮರತ್ನ ವಿಶೇಷ ಪದವಿ ನೀಡಿ ಗೌರವ ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ವೀರಶೈವ-ಲಿಂಗಾಯತ ಧರ್ಮೋತ್ತೇಜಕ ಸಮಾರಂಭ ಮಾಡಲು ಸಿದ್ಧತೆ ನಡೆಸಲಾಗುವುದು ಎಂದರು.
ಬಳಿಕ ಮಾತನಾಡಿದ ಉಜ್ಜಯಿನಿ ಜಗದ್ಗುರಗಳು, ಲಿಂಗಾಯತ-ವೀರಶೈವ ಎರಡು ಒಂದೇ. ಪ್ರತ್ಯೇಕ ಧರ್ಮದ ವಿಚಾರವಾಗಿ ಈಗಾಗಲೇ ಜನರು ಇದಕ್ಕೆ ಉತ್ತರ ಕೊಟ್ಟಿದ್ದಾರೆ. ಹಿಂದಿನ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಮತ್ತೆ ಇದರ ಬಗ್ಗೆ ಹೋರಾಟ ನಡೆದದ್ರೆ ಮುಂದೆ ನಾವು ಪ್ರತಿಕ್ರಿಯೆ ನೀಡುತ್ತೇವೆ ಎಂದರು.