ಎಲೆಕ್ಷನ್​​ನಲ್ಲಿ ಬೆಂಬಲ ನೀಡಿದ್ದೇನೆ, ಹಣ ಕೊಡಿ: ಶಾಸಕ ಅಜಯ್‌ಸಿಂಗ್‌ಗೆ ಕಾರ್ಯಕರ್ತನ ಕಿರುಕುಳ

ಕಲಬುರ್ಗಿ: ಚುನಾವಣೆಯಲ್ಲಿ ನಿಮ್ಮ ಗೆಲುವಿಗಾಗಿ ಬೆಂಬಲ ನೀಡಿದ್ದೇವೆ. ಹಾಗಾಗಿ ನಮಗೆ ₹15 ಲಕ್ಷ ಹಣ ಕೊಡಿ ಎಂದು ಶಾಸಕ ಡಾ. ಅಜಯ್‌ಸಿಂಗ್‌ಗೆ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಜೇವರ್ಗಿ ತಾಲೂಕಿನ ಆಂದೋಲ ಗ್ರಾಮದ ಶಿವಶರಣರೆಡ್ಡಿ ಎಂಬಾತ ಶಾಸಕರಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಚುನಾವಣೆ ಸಮಯದಲ್ಲಿ ಶಾಸಕರು ಶಿವಶರಣರೆಡ್ಡಿಗೆ ಬೆಂಬಲ ನೀಡಿ ಎಂದು ಕೇಳಿದ್ದರಂತೆ. ಈಗ, ನಾನು ಬೆಂಬಲ ನೀಡಿದ್ದೇನೆ. ನನಗೆ ಹಣ ಕೊಡಿ ಎಂದು ದುಂಬಾಲು ಬಿದ್ದಿದ್ದಾನೆ ಎನ್ನಲಾಗಿದೆ. ಶಿವಶರಣರೆಡ್ಡಿ ಕಿರುಕುಳಕ್ಕೆ ಬೇಸತ್ತ ಶಾಸಕರು ಮೌಖಿಕವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಶಾಸಕ ಹಾಗೂ ಕಾರ್ಯಕರ್ತನ ಸಂಭಾಷಣೆ ಕ್ಲಿಪ್​ ಹಾಗೂ ಮೆಸೆಜ್​ ಚಾಟ್​​ ಲಭ್ಯವಾಗಿದೆ.

ನಿಮ್ಮ ಸಲಹೆ ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂರ್ಪಕಿಸಿ: contact@firstnews.tv