ವಾರಣಾಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧಿಸಲ್ಲ ಪ್ರಿಯಾಂಕಾ, ‘ಕೈ’ ಟಿಕೆಟ್ ಸಿಕ್ಕಿದ್ದು ಯಾರಿಗೆ?

ನವದೆಹಲಿ: ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಮೋದಿ ವಿರುದ್ಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ವಾದ್ರಾ ಸ್ಪರ್ಧಿಸುತ್ತಾರೆ ಅಂತ ಇಷ್ಟು ದಿನ ಚರ್ಚೆಯಾಗ್ತಿತ್ತು. ಈಗ ಆ ಎಲ್ಲಾ ಊಹಾಪೋಹಗಳಿಗೆ ಬ್ರೇಕ್ ಬಿದ್ದಿದೆ. ವಾರಣಾಸಿಯಿಂದ ಅಜಯ್​​ ರೈ ಅವರಿಗೆ ಕಾಂಗ್ರೆಸ್​ ಟಿಕೆಟ್​​ ಘೋಷಣೆಯಾಗಿದೆ. ಈ ಬಗ್ಗೆ ಇಂದು ಕಾಂಗ್ರೆಸ್​​ನಿಂದ​ ಅಧಿಕೃತ ಘೋಷಣೆ ಹೊರಬಿದ್ದಿದೆ.

ನಾಳೆ ವಾರಣಾಸಿಯಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಸಲಿದ್ದು, ಇಂದು ಬೃಹತ್​ ರೋಡ್​ ಶೋ ನಡೆಸಲಿದ್ದಾರೆ. ಈ ಮಧ್ಯೆಯೇ ವಾರಣಾಸಿ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್​ ಫೈನಲ್ ಆಗಿದೆ. ಪ್ರಿಯಾಂಕಾ ವಾದ್ರಾ ಸ್ಪರ್ಧೆ ಬಗ್ಗೆ ಕಳೆದ ವಾರ ರಾಹುಲ್ ಗಾಂಧಿ ಅವರನ್ನ ಪ್ರಶ್ನಿಸಿದ್ದಾಗ, ಈ ವಿಷಯವನ್ನು ನಿಮ್ಮ ಊಹೆಗೆ ಬಿಡುತ್ತೇನೆ ಎಂದಿದ್ರು. ಕಾಂಗ್ರೆಸ್​​ನ ಬ್ರಹ್ಮಾಸ್ತ್ರ ಅಂತ ಕರೆಯಲಾಗೋ ಪ್ರಿಯಾಂಕಾ ವಾದ್ರಾ ಅವರೇ ಈ ಬಾರಿ ಮೋದಿ ವಿರುದ್ಧ ಸ್ಪರ್ಧಿಸುತ್ತಾರೆ ಅಂತ ಎಲ್ಲರೂ ನಿರೀಕ್ಷಿಸಿದ್ದರು. ಆದ್ರೆ ಆ ಎಲ್ಲಾ ನಿರೀಕ್ಷೆಗೆ ಈಗ ಬ್ರೇಕ್ ಬಿದ್ದಿದೆ.

ಅಂದ್ಹಾಗೆ 2014ರ ಲೋಕಸಭಾ ಚುನಾವಣೆಯಲ್ಲೂ  ಅಜಯ್​ ರೈ ಕಾಂಗ್ರೆಸ್​​ನಿಂದ ಸ್ಪರ್ಧಿಸಿದ್ದರು. ಆಗ ಅವರು ಕೇವಲ 75 ಸಾವಿರ ವೋಟ್​​ಗಳೊಂದಿಗೆ ಮೂರನೇ ಸ್ಥಾನ ಪಡೆದಿದ್ದರು. ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್ 2 ಲಕ್ಷ ಮತಗಳನ್ನ ಗಳಿಸಿದ್ದರು. ಪ್ರಧಾನಿ ನರೇಂದ್ರ ಮೋದಿ 5.8 ಲಕ್ಷ ಮತಗಳೊಂದಿಗೆ ಜಯಭೇರಿ ಬಾರಿಸಿದ್ದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv