ನನ್ನ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್‌ಗೆ ಅಭ್ಯರ್ಥಿ ಸಿಗುತ್ತಿಲ್ಲ: ಸಂಸದ ಜೋಶಿ

ಧಾರವಾಡ : ನನ್ನ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್‌ ಪಕ್ಷಕ್ಕೆ ಅಭ್ಯರ್ಥಿ ಸಿಗುತ್ತಿಲ್ಲ. ಈ ಸಮಸ್ಯೆ ಸಾಕಷ್ಟು ಕಡೆಗಳಲ್ಲಿ ಆಗಿದೆ. 125 ವರ್ಷದ ಪಕ್ಷಕ್ಕೆ ಅಭ್ಯರ್ಥಿ ಸಿಗುತ್ತಿಲ್ಲ ಎಂದು ಧಾರವಾಡದಲ್ಲಿ ಸಂಸದ ಪ್ರಹ್ಲಾದ್ ಜೋಶಿ ಕಾಂಗ್ರೆಸ್ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಅವಕಾಶ ಸಿಕ್ಕರೆ ರಾಹುಲ್ ವಿರುದ್ಧ ಪ್ರಚಾರಕ್ಕೆ ಹೋಗುತ್ತೇನೆ
ಇನ್ನು, ರಾಹುಲ್ ಗಾಂಧಿ ಕೇರಳದ ವಯನಾಡ್‌ನಿಂದ ಸ್ಪರ್ಧೆ ಮಾಡುವ ವಿಚಾರದ ಬಗ್ಗೆ ಮಾತನಾಡಿರುವ ಸಂಸದ ಜೋಶಿ ರಾಹುಲ್ ಅಮೇಥಿ ಮತ್ತು ವಯನಾಡ್ ಎರಡೂ ಕ್ಷೇತ್ರಗಳಲ್ಲಿ ಸೋಲುತ್ತಾರೆ. ಚುನಾವಣೆಯಲ್ಲಿ ಸೋತು ನಿರುದ್ಯೋಗಿಯಾಗುತ್ತಾರೆ. ನನಗೆ ಅವಕಾಶ ಸಿಕ್ಕರೆ ಅವರ ವಿರುದ್ಧ ಪ್ರಚಾರಕ್ಕೆ ಹೋಗುತ್ತೇನೆ. ಅವರನ್ನು ಸೋಲಿಸಿಯೇ ತೀರುತ್ತೇವೆ ಎಂದು ಹೇಳಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv