ಮೋದಿ ಸಮಾವೇಶದಲ್ಲಿ ಸಾಗಿಸಿದ ‘ಬ್ಲಾಕ್​ ಪೆಟ್ಟಿಗೆ’ ವಿರುದ್ಧ ಇಸಿಗೆ ದೂರು: ಕಾಂಗ್ರೆಸ್

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಸಮಾವೇಶದ ವೇಳೆ ಪಿಎಂ ಹೆಲಿಕಾಪ್ಟರ್​ನಿಂದ ತರಾತುರಿಯಲ್ಲಿ ಬ್ಲ್ಯಾಕ್​ ಬಾಕ್ಸ್​ ಒಂದನ್ನ ಇನೋವಾ ಕಾರಿಗೆ ಹಾಕಿಕೊಂಡು ಸಾಗಿಸಿರುವ ವಿಡಿಯೋ ವೈರಲ್​  ಬಗ್ಗೆ ಕರ್ನಾಟಕ ಕಾಂಗ್ರೆಸ್​ ದೂರು ನೀಡಿದೆ. ಈ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು’ ಅಂತಾ ಕಾಂಗ್ರೆಸ್​ ವಕ್ತಾರ ಆನಂದ್​ ಶರ್ಮಾ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅನಂದ್ ಶರ್ಮಾ, ಏಪ್ರಿಲ್ 9 ರಂದು ಬಿಜೆಪಿ ಕರ್ನಾಟಕದ ಚಿತ್ರದುರ್ಗದಲ್ಲಿ ಸಮಾವೇಶ ಮಾಡಿತ್ತು. ಈ ವೇಳೆ ಪ್ರಧಾನಿ ಮೋದಿ ಬಂದಿಳಿದ ಹೆಲಿಕಾಪ್ಟರ್​ನಿಂದ ಬ್ಲ್ಯಾಕ್​ ಬಾಕ್ಸ್​​ ಅನ್ನ ತರಾತುರಿಯಲ್ಲಿ ಇಳಿಸಿ ಇನೋವಾ ಕಾರಿನಲ್ಲಿ ಸಾಗಿಸಲಾಗಿದೆ. ಶಿಷ್ಟಾಚಾರ ಇದ್ದರೂ ತರಾತುರಿಯಲ್ಲಿ ಪೆಟ್ಟಿಗೆಯನ್ನ ಎಸ್‌ಪಿಜಿ ಭದ್ರತೆಯಲ್ಲಿ ಖಾಸಗಿ ಕಾರಿನಲ್ಲಿ ಸಾಗಿಸಲಾಗಿದೆ. ಆ ಪೆಟ್ಟಿಗೆಯಲ್ಲಿ ಇರೋದು ಏನು ಅನ್ನೋದರ ಬಗ್ಗೆ ತನಿಖೆ ಆಗಬೇಕಿದೆ ಎಂದು ಒತ್ತಾಯಿಸಿದರು.

ಈಗಾಗಲೇ ಕರ್ನಾಟಕ ಕಾಂಗ್ರೆಸ್​​ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ವಿಡಿಯೋ ಆಧಾರದ ಮೇಲೆ ಚುನಾವಣಾ ಆಯೋಗ ತನಿಖೆ ನಡೆಸಬೇಕು. ಸಾಗಿಸಲಾಗಿರುವ ಟ್ರಂಕ್​ನಲ್ಲಿ ಹಣ ಇರಬಹುದು ಅನ್ನೋ ಅನುಮಾನ ವ್ಯಕ್ತವಾಗಿದೆ. ಆ ಪೆಟ್ಟಿಗೆಯನ್ನ ಎಲ್ಲಿಗೆ ಕೊಂಡೊಯ್ಯಲಾಗಿದೆ. ಆ ಪೆಟ್ಟಿಗೆಯಲ್ಲಿ ಏನಿದೆ ಅನ್ನೋದರ ಬಗ್ಗೆ ತನಿಖೆ ಆಗಬೇಕು ಅಂತಾ ಆಗ್ರಹಿಸಿದ್ದರು.

ಇದನ್ನೂ ಓದಿ: ಮೋದಿ ಹೆಲಿಕಾಪ್ಟರ್​​ನಿಂದ ಸೀಕ್ರೆಟ್​​ ಬಾಕ್ಸ್​ ಸಾಗಣೆ: ಕಪ್ಪುಪೆಟ್ಟಿಗೆ ಬಗ್ಗೆ ಕಾಂಗ್ರೆಸ್​​ ಅನುಮಾನ


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv