ವಯಸ್ಸಾಗಿದೆ ಅಂತಾ ಕಾಂಗ್ರೆಸ್​​ ನನ್ನನ್ನು ವೇಸ್ಟ್ ಮಾಡಿದೆ: ಶಾಮನೂರು

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರ ಇನ್ನೂ ಗೊಂದಲಮಯವಾಗಿದೆ. ಅಭ್ಯರ್ಥಿ ಆಯ್ಕೆ ವಿಚಾರದ ಬಗ್ಗೆ ನನಗೇನೂ ಗೊತ್ತಿಲ್ಲ. ನಮಗೆ ವಯಸ್ಸಾಗಿದೆ ಅಂತ ನಮ್ಮನ್ನು ವೇಸ್ಟ್ ಮಾಡಿದ್ದಾರೆ ಎಂದು ಕಾಂಗ್ರೆಸ್​ನ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ಮಗನ ಸ್ಪರ್ಧೆ ಬಗ್ಗೆಯೂ ನನಗೇನು ಗೊತ್ತಿಲ್ಲ 
ದಾವಣಗೆರೆಯಲ್ಲಿ ಮಾತನಾಡಿದ ಅವರು, ಎಸ್​​.ಎಸ್. ಮಲ್ಲಿಕಾರ್ಜುನ್ ಸ್ಪರ್ಧೆಗೆ ಹಿಂದೇಟು ಹಾಕಿರುವ ಹಿನ್ನೆಲೆ ಅಭ್ಯರ್ಥಿ ಯಾರಂತ ನನಗೆ ಗೊತ್ತಿಲ್ಲ. ಅಭ್ಯರ್ಥಿಯನ್ನ ಹೈ ಕಮಾಂಡ್ ಆಯ್ಕೆ ಮಾಡುತ್ತಾರೆ. ನನಗೆ ಹೈಕಮಾಂಡ್​​ನಿಂದ ಯಾವುದೇ ಮೆಸೇಜ್ ಕೂಡ ಬಂದಿಲ್ಲ. ಹಾಗಾಗಿ ಮಲ್ಲಿಕಾರ್ಜುನ್ ಸ್ಪರ್ಧೆ ಬಗ್ಗೆ ಆತನನ್ನೇ ಕೇಳಿ, ಆ ಬಗ್ಗೆ ನನಗೇನು ಗೊತ್ತಿಲ್ಲ ಎಂದಿದ್ದಾರೆ.

ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಎಸ್.ಎಸ್. ಮಲ್ಲಿಕಾರ್ಜುನ್ ಸ್ಪರ್ಧಿಸುತ್ತಾರೆ ಎಂದು ಮೊನ್ನೆಯಷ್ಟೆ ಹೇಳಿದ್ದರು. ಅಲ್ಲದೇ, ಈ ಬಾರಿ ಕಾಂಗ್ರೆಸ್ ಗೆಲುವು ಖಚಿತ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದರು.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv