ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಎಚ್.ಬಿ. ಮಂಜಪ್ಪ

ದಾವಣಗೆರೆ: ಸಾವಿರಾರು ಕೈ ಕಾರ್ಯಕರ್ತರೊಡನೆ ಡಿಸಿ ಕಚೇರಿಗೆ ಬಂದು ಕಾಂಗ್ರೆಸ್ ಅಭ್ಯರ್ಥಿ ಎಚ್.ಜಿ. ಮಂಜಪ್ಪ ಇಂದು ನಾಮಪತ್ರ ಸಲ್ಲಿಸಿದ್ದಾರೆ. ದಾವಣಗೆರೆ ಕಾಂಗ್ರೆಸ್ ಲೋಕಸಭಾ ಉಸ್ತುವಾರಿ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್​, ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಜೆಡಿಎಸ್ ಮುಖಂಡ ಹೊದಿಗೆರಿ ರಮೇಶ್ ಬೆಂಬಲದೊಂದಿಗೆ ಮಂಜಪ್ಪ ನಾಮ ಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅಭ್ಯರ್ಥಿ ಮಂಜಪ್ಪ, ಕಾರ್ಯಕರ್ತರು ಬಹಳ ಹುಮ್ಮಸ್ಸಿನಿಂದ ಇದ್ದಾರೆ. ಯಾರಿಗೂ ಒಂದು ರೂಪಾಯಿ ದುಡ್ಡು ಕೊಟ್ಟಿಲ್ಲ. ಪ್ರಚಾರಕ್ಕೂ ದುಡ್ಡುಕೊಟ್ಟಿಲ್ಲ. ಬಿಜೆಪಿಯವರು ದುಡ್ಡು ಕೊಟ್ಟು ಪ್ರತಿ ಹಳ್ಳಿಗೆ ಬಸ್​​ಗಳನ್ನು ಕಳಿಸಿದ್ದಾರೆ. ಕೆಲ ಬಸ್ಸುಗಳು ಖಾಲಿ ಬಂದಿವೆ. ಕೆಲ ಬಸ್ಸುಗಳಲ್ಲಿ ಕೆಲವೇ ಕೆಲ ಜನರು ಬಂದಿದ್ದಾರೆ. ಒಂದೂ ರೂಪಾಯಿ ಕೊಡದೇ ಬೃಹತ್ ಸಂಖ್ಯೆಯಲ್ಲಿ ಕಾರ್ಯಕರ್ತರು ಬಂದು ನಮ್ಮನ್ನ ಬೆಂಬಲಿಸಿದ್ದಾರೆ. ಕಾಂಗ್ರೆಸ್ ಈ ಬಾರಿ ಜಯಭೇರಿ ಭಾರಿಸಲಿದೆ ಎಂದು ಮಂಜಪ್ಪ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಬಿಜೆಪಿ ಸುಳ್ಳು ಹೇಳಿ ಅಧೀಕಾರಕ್ಕೆ ಬಂದಿದಾರೆ. ಜೆಡಿಎಸ್-ಕಾಂಗ್ರೆಸ್ ಎಲ್ಲ ಕಾರ್ಯಕರ್ತರು ತಳಹಂತದಿಂದ ಕೆಲಸ ಮಾಡುತ್ತಿದ್ದಾರೆ. ಅತೀ ಹೆಚ್ಚು ಲೀಡಿಂಗ್​​​ನಲ್ಲಿ ಬರುತ್ತೇವೆ ಎಂದು ಹೇಳುತ್ತಿರುವ ಬಿಜೆಪಿಯವರಿಗೆ ಜಿಲ್ಲೆಯ ಜನ ಮೇ 23 ನೇ ತಾರೀಖು ಉತ್ತರ ಕೊಡಲಿದ್ದಾರೆ ಎಂದರು.

ಇದೇ ವೇಳೆ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಮಂಜಪ್ಪ ಅತೀ ಹೆಚ್ಚಿನ ಜನಸಸಂಖ್ಯೆಯಲ್ಲಿ ಬಂದು ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್​​​ನ ಒಂದುವರೆ ಲಕ್ಷ ಮತಗಳಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಎಲ್ಲ ಮತಗಳು ಒಟ್ಟುಗೂಡಿದರೆ ನಮ್ಮ ಅಭ್ಯರ್ಥಿ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv