ಫಲಿತಾಂಶದ ಎಫೆಕ್ಟ್​, ಸುರಪುರದಲ್ಲಿ ಸಂಘರ್ಷ..!

ಯಾದಗಿರಿ: ಜಿಲ್ಲೆಯ ಸುರಪುರ ವಿಧಾನಸಭಾ ಮತಕ್ಷೇತ್ರದ ಶ್ರೀನಿವಾಸಪುರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್​​ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ. ಸುರಪುರದಿಂದ ಗೆದ್ದಿರುವ ಬಿಜೆಪಿ ಅಭ್ಯರ್ಥಿ ರಾಜುಗೌಡ ಅಭಿಮಾನಿಗಳು ಗ್ರಾಮದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದರು. ಈ ವೇಳೆ ಕಾಂಗ್ರೆಸ್​​​​​ ಕಾರ್ಯಕರ್ತ ದೇವಣ್ಣಗೌಡನ ಮನೆಯ ಮುಂದೆ ಬಿಜೆಪಿ ಅಭಿಮಾನಿ ಪಟಾಕಿ ಸಿಡಿಸಲು ಹೋದಾಗ ಮೊದಲು ದೇವಣ್ಣಗೌಡ ಬಿಜೆಪಿ ಕಾರ್ಯಕರ್ತನಿಗೆ ಪಟಾಕಿ ಹಚ್ಚದಂತೆ ಹೇಳಿದ್ದಾನೆ. ಅಲ್ಲದೆ ದೇವಣ್ಣಗೌಡ ಬಿಜೆಪಿಗನ ಮೇಲೆ ಹಲ್ಲೆ ನಡೆಸಿದ್ದಾನೆ. ಹೆಣ್ಣುಮಕ್ಕಳ ಮೇಲು ಸಹ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ರಾಜುಗೌಡ ಗೆಲುವಿಗೆ ದೀಡ್​ ನಮಸ್ಕಾರ..!
ಇನ್ನೊಂದೆಡೆ ಬಿಜೆಪಿ ಅಭ್ಯರ್ಥಿ ರಾಜುಗೌಡ ಗೆಲುವು ಸಾಧಿಸಿದಕ್ಕೆ ಬಿಜೆಪಿ ಕಾರ್ಯಕರ್ತನೊಬ್ಬ ಗ್ರಾಮದ ದುರ್ಗಮ್ಮ ದೇವಿಗೆ ದೀಡ್​ ನಮಸ್ಕಾರ ಹಾಕಿ ಹರಕೆ ತೀರಿಸಿದ್ದಾನೆ. ಗಡ್ಡಿ ಶರಣ ಎಂಬ ಯುವಕ ಡೊಳ್ಳಿನೊಂದಿಗೆ ತೆರಳಿ, ದುರ್ಗಮ್ಮ ದೇವಿಗೆ ಹರಕೆ ತೀರಿಸಿ ಗೆಲುವಿನ ಸಂಭ್ರಮ ಆಚರಿಸಿದ್ದಾನೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv