NSUI ಪ್ರಧಾನ ಕಾರ್ಯದರ್ಶಿ ಹಲ್ಲೆ ಪ್ರಕರಣ: ಕೈ ಕಾರ್ಯಕರ್ತರಿಂದ ಇಂದು ಪ್ರತಿಭಟನೆ

ಬೆಂಗಳೂರು: NSUI ಪ್ರಧಾನ ಕಾರ್ಯದರ್ಶಿ ಹಾಗೂ ಸದಸ್ಯರ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ 11 ಗಂಟೆಗೆ ಕೆಜಿ ಹಳ್ಳಿ ಪೊಲೀಸ್​ ಠಾಣೆಯ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಕಳೆದ ಶುಕ್ರವಾರ ರಾತ್ರಿ ಕಮ್ಮನಹಳ್ಳಿಯಲ್ಲಿ ಸುಮನ್ ಹಾಗೂ ಆತನ ಗ್ಯಾಂಗ್ ಕುಡಿದ ಮತ್ತಿನಲ್ಲಿ , NSUI ಪ್ರಧಾನ ಕಾರ್ಯದರ್ಶಿ ರಾಜೇಶ್ ಹಾಗೂ ಕಾರ್ಯದರ್ಶಿ ಪ್ರಸಾದ್ ಮೇಲೆ ಗಂಭೀರ ಹಲ್ಲೆ ನಡೆಸಿದ್ದರು. ಅಷ್ಟೇ ಅಲ್ಲ ರಾಜೇಶ್ ಮನೆ ಮುಂದೆ ಗಲಾಟೆ ಮಾಡಿ ಧಮ್ಕಿ ಹಾಕಿದ್ರು. ಮಚ್ಚು ಲಾಂಗ್ ಹಿಡಿದುಕೊಂಡು ಹಲ್ಲೆ ಮಾಡಿದ್ರು. ಪ್ರಕರಣ ಸಂಬಂಧ ಈಗಾಗಲೇ ಕೆಜಿ ಹಳ್ಳಿ ಠಾಣೆಗೆ ದೂರು ನೀಡಲಾಗಿದೆ. ಆದ್ರೆ ಪೊಲೀಸರು ಮಾತ್ರ ಆರೋಪಿ ಸುಮನ್ ವಿರುದ್ಧ ಪ್ರಕರಣ ದಾಖಲಿಸ್ತಿಲ್ಲ ಎನ್ನಲಾಗಿದೆ. ಆರೋಪಿಯ ಕೃತ್ಯ ಸಂಪೂರ್ಣ ಸಿಸಿಟಿವಿಯಲ್ಲಿ ಸೆರೆಯಾಗಿದ್ರೂ, ಆತ ನಿವೃತ್ತ ಪೊಲೀಸ್ ಸಿಬ್ಬಂದಿ ಪುತ್ರ ಅನ್ನೋ ಕಾರಣಕ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆ ನಡೆದು ಮೂರು ದಿನವಾದ್ರೂ ಆರೋಪಿಗಳನ್ನ ಬಂಧಿಸದ್ದಕ್ಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲು ಒತ್ತಾಯಿಸಿ ಇಂದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.


Follow us on:

YouTube: firstNewsKannada Instagram: firstnews.tv Face Book: firstnews.tv Twitter: firstnews.tv