ಮೋದಿ ಪ್ರಚಾರಕ್ಕೆ 42-78 ಗಂಟೆ ನಿಷೇಧ ಹೇರಿ ಎಂದು ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

ದೆಹಲಿ: ಕಾಂಗ್ರೆಸ್​ ಪಕ್ಷ ನಿನ್ನೆ ಚುನಾವಣಾ ಆಯೋಗಕ್ಕೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದ ಅಡಿಯಲ್ಲಿ ದೂರು ನೀಡಿದೆ. ಕಾಂಗ್ರೆಸ್​ನ ಅಭಿಷೇಕ್​ ಮನು ಸಿಂಘ್ವಿ ನೇತೃತ್ವದ ನಿಯೋಗ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ ದೂರು ನೀಡಿದ್ದಾರೆ. ನಿನ್ನೆ ಅಹಮದಾಬಾದ್​ನ ಗಾಂಧಿನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವೋಟ್ ಹಾಕಿದ ಬಳಿಕ ರೋಡ್​ ಶೋ ನಡೆಸಿದ್ರು. ಇದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಅಂತಾ ಅಭಿಷೇಕ್​ ಸಿಂಘ್ವಿ ಆರೋಪಿಸಿದ್ದಾರೆ. ಅಲ್ಲದೇ ಮೋದಿಯವರು ಕಾನೂನಿಗೆ ಮಾನ್ಯತೆಯನ್ನೇ ನೀಡದ ವ್ಯಕ್ತಿಯಾಗಿದ್ದು, ನೀತಿ ಸಂಹಿತೆಯನ್ನು ಉಲ್ಲಂಘಿಸಿವುದನ್ನು ಅಭ್ಯಾಸ ಮಾಡಿಕೊಂಡಂತಿದೆ ಅಂತಾ ದೂರಿದ್ದಾರೆ. ಇನ್ನೂ ಇದೇ ವೇಳೆ ಅಮಿತ್ ಶಾ ವಾಯುಸೇನೆಯನ್ನು ಮೋದಿಯ ಸೈನ್ಯ ಅಂತಾ ಕರೆದಿರುವ ಸಂಬಂಧ ಅವರಿಗೂ ಚುನಾವಣಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ನಿಷೇಧ ಹೇರಬೇಕು ಎಂದು ಆಗ್ರಹಿಸಿದ್ದಾರೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv