ಅಂಬೇಡ್ಕರ್ ಕೃಷಿ ಚಿಂತನೆ ಕುರಿತು ಜು.8ಕ್ಕೆ ವಿಚಾರ ಸಂಕಿರಣ

ಕಲಬುರ್ಗಿ: ಜುಲೈ 8ರಂದು ಕೃಷಿ ಚಿಂತನ ವೇದಿಕೆಯಿಂದ ನಗರದ ಸಿದ್ಧಾರೂಢ ಕಾಲೇಜು ಆವರಣದಲ್ಲಿ ಕೃಷಿ ವಿಚಾರ ಸಂಕಿರಣ ನಡೆಸಲಾಗುತ್ತದೆ ಎಂದು ಪತ್ರಿಕಾ ಭವನದಲ್ಲಿ ಮಾಜಿ ಶಾಸಕ ಬಿ.ಆರ್.ಪಾಟೀಲ್ ತಿಳಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಭಾರತೀಯ ಕೃಷಿ ನೀತಿ ಬಗ್ಗೆ ಹೇಳಿದ್ದು ಬಹಳಷ್ಟು ಜನರಿಗೆ ಗೊತ್ತಿಲ್ಲ. 1936 ರಲ್ಲೇ ಕೃಷಿ ನೀತಿ ಕುರಿತು ಡಾ.ಬಿ.ಆರ್.ಅಂಬೇಡ್ಕರ್ ಮಾಹಿತಿ ನೀಡಿದ್ದರು. ಆದರೆ ಇಂದು ದೇಶದಲ್ಲಿ ಅನಾವಶ್ಯಕ ವಾದ ವಿವಾದಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು. ದೇಶದ ಕೃಷಿ ವಲಯ ಬಿಕ್ಕಟ್ಟಿನಲ್ಲಿದ್ದು ಇಂದು ಕಾರ್ಪೊರೇಟ್ ಕಂಪೆನಿಗಳು ಸಹ ಕೃಷಿ ಮಾಡಲು ಹೊರಟಿವೆ. ಕೃಷಿ ಹಾಗೂ ಉದ್ಯಮಕ್ಕೆ ಸಮಾನ ದರ್ಜೆ ಕೊಡಬೇಕೆಂದು ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದರು. ನಮ್ಮ ದೇಶದ ಭೂಸುಧಾರಣೆ ಕುರಿತು ಪರಿಚಯವನ್ನು ಸಹ ನೀಡಿದ್ದರು. ಈ ಎಲ್ಲ ವಿಚಾರಗಳ ಬಗ್ಗೆ ಜನರ ಮುಂದಿಡಲು ಸಂವಾದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.

ನಿಮ್ಮ ಸಲಹೆ ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂರ್ಪಕಿಸಿ: contact@firstnews.tv