ಶಾಸಕ ರೇಣುಕಾಚಾರ್ಯ ಸೇರಿ 50 ಜನರ ವಿರುದ್ಧ ಪ್ರಕರಣ ದಾಖಲು

ದಾವಣಗೆರೆ: ಜನರಿಗೆ ಮುಕ್ತವಾಗಿ ಮರಳು ವಿತರಿಸಲು ತುಂಗಭಧ್ರಾ ನದಿಗೆ ಇಳಿದು ಶಾಸಕ ರೇಣುಕಾಚಾರ್ಯ ಮರಳು ತುಂಬಿದ್ದರು.. ಎತ್ತಿನ ಬಂಡಿಯಲ್ಲಿ ಬೆಂಬಲಿಗರೊಂದಿಗೆ ರೇಣುಕಾಚಾರ್ಯ ನದಿಯಿಂದ ಮರಳನ್ನು ಕ್ಷೇತ್ರದ ಜನರಿಗಾಗಿ ಹೊತ್ತೊಯ್ದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸೇರಿ 30 ಜನರ ವಿರುದ್ಧ ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿನ್ನ ಕಾನೂನು ಬಾಹಿರವಾಗಿ ತುಂಗಭದ್ರ ನದಿಯಲ್ಲಿ ಮರಳು ತುಂಬಿದ್ದಕ್ಕಾಗಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸೇರಿ 50 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ನಿನ್ನೆ  ಪೊಲೀಸ್ ಹಾಗೂ ಜಿಲ್ಲಾಡಳಿತಕ್ಕೆ ಸವಾಲು ಹಾಕಿ  50 ಕ್ಕೂ ಹೆಚ್ಚು ಎತ್ತಿನಗಾಡಿಗಳಲ್ಲಿ ಶಾಸಕ ರೇಣುಕಾಚಾರ್ಯ ಮರಳು ತುಂಬಿದ್ದರು. ಹೊನ್ನಾಳಿ ಬಳಿಯ ಹೊಳೆ ಮಾದಾಪುರ ಮರಳು ಪಾಯಿಂಟ್‌ನಲ್ಲಿ ನಿಯಮ ಉಲ್ಲಂಘಿಸಿ ಶಾಸಕರು ಮರಳು ತುಂಬಿದ್ದರು ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರೇಣುಕಾಚಾರ್ಯ ಅವರನ್ನು  ಶೀಘ್ರ ಬಂಧಿಸುವ ಸಾಧ್ಯತೆ ಇದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv