ಮೋದಿ ಹೆಲಿಕಾಪ್ಟರ್​​ನಿಂದ ಸೀಕ್ರೆಟ್​​ ಬಾಕ್ಸ್​ ಸಾಗಣೆ: ಜಿಲ್ಲಾ ಚುನಾವಣಾಧಿಕಾರಿಗಳಿಗೆ ದೂರು

ಚಿತ್ರದುರ್ಗ :ಚಿತ್ರದುರ್ಗದ ಬಿಜೆಪಿ ಹಮ್ಮಿಕೊಂಡಿದ್ದ ಸಮಾವೇಶಕ್ಕೆ ಮೋದಿ ಆಗಮಿಸಿದ್ದ ವೇಳೆ  ಹೆಲಿಕ್ಯಾಪ್ಟರ್‌ನಿಂದ ಕಾರಿನಲ್ಲಿ ಬಾಕ್ಸ್‌ನ್ನು ಶಿಫ್ಟ್ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ. ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ವಕ್ತಾರ  ಶಿವು ಯಾದವ್  ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಬಾಕ್ಸ್ ನಲ್ಲಿ ಹಣ ರವಾನೆಯಾಗಿದೆಯೆಂಬ ಗುಮಾನೆಯಿದೆ. ,ಪ್ರಕರಣ ತನಿಖೆ ಮಾಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಮೋದಿ ವಿರುದ್ದ ಕೇಸು ದಾಖಲಿಸಿ ತನಿಖೆ ನಡೆಸುವಂತೆ ಜಿಲ್ಲಾ,ರಾಜ್ಯ, ರಾಷ್ಟ್ರ ಚುನಾವಣಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಪ್ರಕರಣದಲ್ಲಿ ಬಾಕ್ಸ್ ಸಾಗಿಸಿದವರು ಯಾರು? ಕಾರು ಯಾವುದು? ಎಲ್ಲಿಗೆ ಹೋಯ್ತು ? ಎಂದು ತನಿಖೆ ಆಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಏಪ್ರಿಲ್ 9ರಂದು ಚಿತ್ರದುರ್ಗದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಸಮಾವೇಶಕ್ಕೆ ಮೋದಿ ಆಗಮಿಸಿದ್ದರು. ಈ ವೇಳೆ ಪ್ರಧಾನಿ ಬಂದಿಳಿದಿದ್ದ ಹೆಲಿಕಾಪ್ಟರ್​ನಿಂದ ಬಾಕ್ಸ್​ವೊಂದನ್ನ ಇಳಿಸಿಕೊಂಡು ತರಾತುರಿಯಲ್ಲಿ ಇನ್ನೋವಾ ಕಾರಿನಲ್ಲಿ ಹಾಕಿಕೊಂಡು ಸಾಗಿಸಲಾಗಿದೆ ಅನ್ನೋ ವಿಡಿಯೋವನ್ನ ಕಾಂಗ್ರೆಸ್​ ರಿಲೀಸ್​ ಮಾಡಿತ್ತು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv