ಕುಂದಗೋಳ ಟಿಕೇಟ್​​ಗಾಗಿ ದಿವಂಗತ ಶಿವಳ್ಳಿ ಕುಟುಂಬದಲ್ಲಿ ಪೈಪೋಟಿ..!

ಹುಬ್ಬಳ್ಳಿ :ಮಾರ್ಚ್ 22ರಂದು ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ(57) ತೀವ್ರ ಹೃದಯಾಘಾತದಿಂದ ನಿಧನರಾಗಿದ್ದರು. ಸಚಿವ ಸಿ.ಎಸ್​. ಶಿವಳ್ಳಿ ಅವರ ನಿಧನದಿಂದ ತೆರವಾಗಿದ್ದ ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಿಸಿದೆ. ಮೇ19 ರಂದು ಚುನಾವಣೆ ನಡೆಯಲಿದ್ದು, ಮೇ 23ಕ್ಕೆ ಎಣೆಕೆ ನಡೆಯಲಿದೆ. ಇದೇ ಹಿನ್ನೆಲೆಯಲ್ಲಿ ಸಿ.ಎಸ್ ಶಿವಳ್ಳಿ ನಿಧನದಿಂದ ಅನುಕಂಪದ ಲಾಭ ಪಡೆಯಲು  ಕಾಂಗ್ರೆಸ್ ನಾಯಕರು ಮುಂದಾಗಿದ್ದು, ಶಿವಳ್ಳಿ ಕುಟುಂಬದವರಿಗೆ ಟಿಕೆಟ್ ನೀಡಲು ಪ್ಲಾನ್ ಮಾಡಲಾಗಿದೆ ಎನ್ನಲಾಗುತ್ತಿದೆ. ಅದ್ರಲ್ಲೂ ಶಿವಳ್ಳಿ ಪತ್ನಿ‌ ಕುಸುಮ ಅಥವಾ ಪುತ್ರ ಅಮರಶಿವ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡಲು ತೀರ್ಮಾನಿಸಿದ್ದು,  ಬಹುತೇಕ ಪತ್ನಿ ಕುಸುಮ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.  ಅಂದ್ಹಾಗೆ, ಟಿಕೆಟ್ ಗಾಗಿ ಶಿವಳ್ಳಿ ಸಹೋದರರಲ್ಲೂ ನಡೆಯುತ್ತಿದೆ ಪೈಪೋಟಿ ನಡೆಯುತ್ತಿದೆ ಎನ್ನಲಾಗುತ್ತಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv