ಪೊಲೀಸರಿಗೇ ಆವಾಜ್.. ರೊಚ್ಚಿಗೆದ್ದ ಪಿಎಸ್​ಐ, ಪುಂಡನಿಗೆ ಟಗರಿನಂತೆ ಡಿಚ್ಚಿ..!

ಬೆಂಗಳೂರು: ಶಿವಾಜಿ ನಗರದ ಕಮರ್ಷಿಯಲ್ ಸ್ಟ್ರೀಟ್​ನಲ್ಲಿ ಪುಂಡರು ಹಾಗೂ ಪೊಲೀಸರ ನಡುವೆ ಗಲಾಟೆ ನಡೆದು ಪಿಎಸ್ಐ ಒಬ್ಬರು ಪುಂಡನಿಗೆ ಡಿಚ್ಚಿ ಹೊಡೆದಿದ್ದಾರೆ. ನಿನ್ನೆ ಶಿವಾಜಿನಗರದ ಗುಲ್ಷನ್ ಶಾದಿ ಮಹಲ್ ಕಮಿಟಿಗೆ ಎಲೆಕ್ಷನ್ ನಡೆಯಿತು. ಈ ವೇಳೆ ಎಲೆಕ್ಷನ್ ಮುಗಿದ ಮೇಲೆ ಮತದಾನ ನಡೆಯುತ್ತಿದ್ದ ಸ್ಥಳದಲ್ಲಿದ್ದ ಸಾರ್ವಜನಿಕರಿಗೆ ಅಲ್ಲಿಂದ ತೆರಳುವಂತೆ ಹೇಳಿದರು. ಇಷ್ಟಕ್ಕೇ ರೊಚ್ಚಿಗೆದ್ದ ಕೆಲ ಪುಂಡರು ನಮಗೇ, ಹೋಗು ಅಂತಾ ಹೇಳ್ತಿಯಾ ಎಂದು ಇನ್ಸ್​ಪೆಕ್ಟರ್ ಮೇಲೆಯೇ ಗಲಾಟೆ ಮಾಡಿದ್ರು. ಆ ವೇಳೆ ಮಾತಿಗೆ ಮಾತು ಬೆಳೆದು ಪುಂಡರು, ಕಮರ್ಷಿಯಲ್​ ಸ್ಟ್ರೀಟ್​ ಠಾಣೆಯ ಇನ್ಸ್​ಪೆಕ್ಟರ್ ನಾಗರಾಜ್​ಗೆ ಆವಾಜ್​ ಹಾಕಿದ್ದಾರೆ. ಈ ವೇಳೆ ಸ್ಥಳದಲ್ಲೇ ಇದ್ದ ಪಿಎಸ್ಐ ಕಿರಣ್ ಪುಂಡನಿಗೆ ಡಿಚ್ಚಿ ಹೊಡೆದಿದ್ದಾರೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv