ಶುಕ್ರವಾರ ರಾತ್ರಿ ನಡೆದ ಫಿಫಾ ವಿಶ್ವಕಪ್​​​ ಬಿ ಗುಂಪಿನ ಪಂದ್ಯದಲ್ಲಿ ಸ್ಪೇನ್ ಹಾಗೂ ಪೋರ್ಚುಗಲ್ ನಡುವಿನ ಕದನ ಡ್ರಾನಲ್ಲಿ ಅಂತ್ಯಗೊಂಡಿದೆ. 3-2 ಅಂತರದಲ್ಲಿ ಸ್ಪೇನ್ ಮುನ್ನಡೆಯೊಂದಿಗೆ ಗೆಲುವಿನ ಸಮೀಪಕ್ಕೆ ಬಂದಿತ್ತಾದರೂ ಕೊನೆಗೆಯಲ್ಲಿ ಕಾಲ್ಚೆಂಡಿನ ಸರದಾರ ರೊನಾಲ್ಡೋ ಸಿಡಿಸಿದ ಗೋಲ್​​​ನಿಂದಾಗಿ ಪಂದ್ಯ 3-3ನೊಂದಿಗೆ ಡ್ರಾನಲ್ಲಿ ಅಂತ್ಯಗೊಂಡಿತು. ರೊನಾಲ್ಡೋ ಹ್ಯಾಟ್ರಿಕ್ ಗೋಲ್​​​​ ಬಲಾಢ್ಯ ತಂಡಗಳ ಕಾದಾಟದಲ್ಲಿ ಮೊದಲು ಪೋರ್ಚುಗಲ್ ಗೋಲ್ ಖಾತೆ ತೆರೆಯಿತು. ಪೋರ್ಚುಗಲ್ ಸ್ಟಾರ್ ಆಟಗಾರ ಕ್ರಿಸ್ಚಿಯಾನೊ ರೊನಾಲ್ಡೋ 4ನೇ ನಿಮಿಷದಲ್ಲಿ ಮೊದಲ ಗೋಲ್ ಬಾರಿಸಿ ಪೋರ್ಚುಗಲ್ ಗೆ 1-0 ಅಂತರದ ಮುನ್ನಡೆ ತಂದುಕೊಟ್ಟರು. 2010 ವಿಶ್ವ ಚಾಂಪಿಯನ್ ಸ್ಪೇನ್ ಪರ 24ನೇ ನಿಮಿಷದಲ್ಲಿ ಡಿಯಾಗೋ ಕೋಸ್ಟ ಮೊದಲ ಗೋಲು ದಾಖಲಿಸಿದ್ರು. ಇನ್ನು ಪಂದ್ಯದ ಮೊದಲಾರ್ಧದಲ್ಲೇ ರೊನಾಲ್ಡೋ ಮತ್ತೊಂದು ಗೋಲ್ ಬಾರಿಸಿ ತಂಡವನ್ನ 2-1ರ ಮುನ್ನಡೆ ತಂದುಕೊಟ್ಟರು. ಅತ್ತ ಸ್ಪೇನ್​​​​ನ ಡಿಯಾಗೋ ಕೋಸ್ಟ ಕೂಡ ಮತ್ತೊಂದು ಗೋಲ್ ಬಾರಿಸಿ ಅಂಕವನ್ನ ಸಮಬಲಗೊಳಿಸಿದ್ರು. ಇದ್ರಿಂದ ದ್ವಿತೀಯಾರ್ಧದ ಪಂದ್ಯದಲ್ಲಿ ಯಾರು ಗೆಲ್ಲಬಹುದು ಅಂತ ತೀವ್ರ ಕುತೂಹಲ ಮೂಡಿಸಿತ್ತು. ಪಂದ್ಯ ಕೊನೆಗೊಳ್ಳುತ್ತಾ ಬಂದಂತೆ ಸ್ಪೇನ್​​​ನ ಪರ ನ್ಯಾಚೋ ಅದ್ಭುತ ಗೋಲ್ ಸಿಡಿಸಿ ತಂಡವನ್ನ 3-2 ಅಂತರದಿಂದ ಮುನ್ನಡೆಸಿದ್ರು. ಇನ್ನೇನು ಪಂದ್ಯ ಸ್ಪೇನ್​​​ನತ್ತ ವಾಲುತ್ತಿದ್ದಂತೆಯೇ ಮಿಂಚಿನಂತೆ ಬಂದ ರೊನಾಲ್ಡೋ 3ನೇ ಗೋಲ್ ಸಿಡಿಸಿ ಪಂದ್ಯವನ್ನ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದ್ರು.
ಕಾಮಿಡಿ
Left Menu Icon
Welcome to First News