ವ್ಹೀಲಿಂಗ್ ಮಾಡಬ್ಯಾಡ್ರೋ ಅಂದ್ರೆ ಕೇಳಲ್ಲ, ಕಾಲೇಜಿಗೆ ಹೋಗ್ತಿದ್ದವ ಪ್ರಾಣಬಿಟ್ಟ

ಬೆಂಗಳೂರು: ನಗರದಲ್ಲಿ ವ್ಹೀಲಿಂಗ್ ಶೋಕಿಗೆ ಯುವಕ ಬಲಿಯಾಗಿದ್ದಾನೆ. ಕೂಡ್ಲು ಗೇಟ್ ಬಳಿ ವ್ಹೀಲಿಂಗ್ ಮಾಡುತ್ತಿದ್ದ, ಪಿಇಎಸ್‌ ಕಾಲೇಜಿನ ದ್ವಿತೀಯ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ಗುರುಮೂರ್ತಿ ಸಾವನ್ನಪ್ಪಿದ್ದಾನೆ.

ಗುರುಮೂರ್ತಿ ಕಾಲೇಜಿಗೆ ತೆರಳುವಾಗ ರಸ್ತೆಯಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ. ಈ ವೇಳೆ ಆಯತಪ್ಪಿ, ಲಾರಿಗೆ ಡಿಕ್ಕಿಯಾಗಿದೆ. ಪರಿಣಾಮ ಗುರುಮೂರ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಹಿಂಬದಿ ಸವಾರ, ಮತ್ತೊಬ್ಬ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೇಲಾಗಿ ಈ ಇಬ್ಬರೂ ಹೆಲ್ಮೆಟ್ ಇಲ್ಲದೇ ಬೈಕ್​ ಚಲಾಯಿಸುತ್ತಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಹುಳಿಮಾವು ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv