ಮೈತ್ರಿ ಸರ್ಕಾರ ಐದು ವರ್ಷ ಪೂರ್ಣಗೊಳ್ಳಲಿದೆ: ಶಾಮನೂರು.

ದಾವಣಗೆರೆ: ಸಿಎಂ ಕುಮಾರಸ್ವಾಮಿ ಮಂಡಿಸಿದ ಬಜೆಟ್ ಗೆ ಶಾಮನೂರು ಶಿವಶಂಕರಪ್ಪ ಫುಲ್ ಮಾರ್ಕ್ಸ್ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಸರ್ವರಿಗೂ ಸಮಪಾಲು ನೀಡಿದ ಬಜೆಟ್ ಇದು, ನನಗೆ ತೃಪ್ತಿ ತಂದಿದೆ. ದಾವಣಗೆರೆಗೂ ಸಹ ನಾಲ್ಕೈದು ಯೋಜನೆಗಳಿಗೆ ಹಣ ನೀಡಿದ್ದಾರೆ. ಬಿಜೆಪಿಯವರು ಗಲಾಟೆ ಮಾಡ್ತಾರೆ ಅಂತಾ ಅವರಿಗೆ ಬಜೆಟ್ ಬುಕ್ ನೀಡಲಿಲ್ಲ.

ನಿನ್ನೇನು ರಾಜ್ಯಪಾಲರ ಭಾಷಣದ ವೇಳೆ ಗಲಾಟೆ ಮಾಡಿದ್ದರು, ಇವತ್ತೂ ಮಾಡಿದ್ದಾರೆ. ಸಿದ್ದರಾಮಯ್ಯ ಬಳಿ ಮತ್ತೊಂದು ಆಪರೇಷನ್ ಕಮಲದ ಆಡಿಯೋ ಇದೆ. ಅದನ್ನ ಅವರು ಬಿಡುಗಡೆ ಮಾಡಿಲ್ಲ. ಆದ್ರೆ, ಸಮಯ ಬಂದಾಗ ಬಿಡುಗಡೆ ಮಾಡ್ತಾರೆ. ಬಿಜೆಪಿಯವರು ಸಮಿಶ್ರ ಸರ್ಕಾರ ಬಿಳಿಸಲು ಟ್ರೈ ಮಾಡ್ತಾ ಇದ್ದಾರೆ. ಸಮಿಶ್ರ ಸರ್ಕಾರ ಯಾವುದೇ ಕಾರಣಕ್ಕೂ ಬೀಳುವುದಿಲ್ಲ. ಮೈತ್ರಿ ಸರ್ಕಾರ ಐದು ವರ್ಷ ಪೂರ್ಣಗೊಳ್ಳಲಿದೆ ಎಂದು ದಾವಣಗೆರೆಯಲ್ಲಿ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ವಿಶ್ವಾಸ ನೀಡಿದ್ದಾರೆ.


Follow us on:

YouTube: firstNewsKannada  Instagram: firstnews_tv  Face Book: firstnews.tv  Twitter: firstnews_tv