ಮೈಸೂರು ದಸರಾಕ್ಕೆ ತಟ್ಟಲ್ಲ ಚುನಾವಣಾ ನೀತಿ ಸಂಹಿತೆ ಬಿಸಿ

ಮೈಸೂರು: ಮೈಸೂರು ದಸರಾದಲ್ಲಿ ಜನಪ್ರತಿನಿಧಿಗಳು ಭಾಗವಹಿಸಲು ಭಾರತೀಯ ಚುನಾವಣಾ ಆಯೋಗ ಅನುಮತಿ ನೀಡಿದೆ.

ಮಂಡ್ಯ ಲೋಕಸಭೆ ಉಪ ಚುನಾವಣೆಗೆ ನವೆಂಬರ್​ 3ರಂದು ದಿನಾಂಕ ನಿಗದಿಯಾಗಿದೆ. ಆದರೆ ಮೈಸೂರು ಜಿಲ್ಲೆಯ ಕೆ.ಆರ್ ನಗರ ತಾಲೂಕು ಮಂಡ್ಯ ಲೋಕಸಭಾ ವ್ಯಾಪ್ತಿಗೆ ಬರುವುದರಿಂದ ಇಲ್ಲಿಯೂ ನೀತಿ ಸಂಹಿತೆ ಬಿಸಿ ತಟ್ಟಲಿದೆಯಾ ಎಂಬ ಪ್ರಶ್ನೆ ಮೂಡಿತ್ತು. ಆದರೆ ಈಗ ಚುನಾವಣ ಆಯೋಗ ಕೆ.ಆರ್.ನಗರ ವಿಧಾಸಭಾ ವ್ಯಾಪ್ತಿಯಲ್ಲಿ ನಡೆಯುವ ಗ್ರಾಮೀಣ ದಸರಾ ಹೊರತು ಪಡಿಸಿ ಉಳಿದೆಲ್ಲೆಡೆಯೂ ರಾಜಕಾರಣಿಗಳ ಭಾಗವಹಿಸುವಿಕೆಗೆ ಅವಕಾಶ ನೀಡಿದೆ.